ರಾತ್ರಿ ವೇಳೆ ಗ್ರಾಮಕ್ಕೆ ನುಗ್ಗುವ ಚಿರತೆ... ಆಹಾರಕ್ಕಾಗಿ ಹುಡುಕಾಟ! - ತರೀಕೆರೆ ತಾಲೂಕಿನ ರಂಗಾಪುರ ಗ್ರಾಮ
ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ತಾಲೂಕಿನ ರಂಗಾಪುರ ಗ್ರಾಮದಲ್ಲಿ ರಾತ್ರಿ ವೇಳೆ ಚಿರತೆ ಕಾಣಿಸಿಕೊಂಡು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ರಂಗಾಪುರ ಗ್ರಾಮದಲ್ಲಿ ಹಲವು ದಿನಗಳಿಂದ ರಾತ್ರಿ ವೇಳೆ ಒಂಟಿ ಚಿರತೆ ಓಡಾಡುತ್ತಿರುವ ವಿಚಾರ ಗ್ರಾಮದ ಜನರಿಗೆ ತಿಳಿದಿತ್ತು. ಆದರೆ ರಾತ್ರಿ ವೇಳೆ ಇದರ ಸಂಚಾರ ಹೆಚ್ಚಾಗಿ ಕಂಡುಬಂದ ಕಾರಣ ರಂಗಾಪುರ ಗ್ರಾಮದ ಜನರು ಮನೆಯಿಂದ ಹೊರ ಬರುವುದಕ್ಕೆ ಹೆದರುವಂತಾಗಿದೆ. ಈಗ ರಂಗಾಪುರದ ಸುತ್ತಮುತ್ತಲಿನ ಮನೆಗಳ ಬಳಿ ಚಿರತೆ ಓಡಾಡುತ್ತಿರುವ ದೃಶ್ಯ ಸ್ವಲ್ಪ ತಡವಾಗಿ ಬೆಳಕಿಗೆ ಬಂದಿದ್ದು, ಚಿರತೆ ಮನೆಯ ಗೇಟ್ ಒಳಗೆ ನುಗ್ಗಿ ನಾಯಿಗಳನ್ನು ಹುಡುಕಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೂಡಲೇ ಈ ಚಿರತೆಯನ್ನು ಹಿಡಿಯುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.