ಡಿಕೆಶಿ ಮನೆಗೆ ನಂಜಾವಧೂತ ಶ್ರೀ ಭೇಟಿ... ಶಿವಕುಮಾರ್ ತಾಯಿಗೆ ಧೈರ್ಯ ತುಂಬಿದ ಸ್ವಾಮೀಜಿ - ಇಡಿ ಬಂಧನದಲ್ಲಿರುವ ಡಿ.ಕೆ.ಶಿವಕುಮಾರ್
ರಾಮನಗರ: ಇಡಿ ಬಂಧನದಲ್ಲಿರುವ ಡಿ.ಕೆ. ಶಿವಕುಮಾರ್ ಅವರ ಕುಟುಂಬಕ್ಕೆ ಮನೋಸ್ಥೈರ್ಯ ತುಂಬುವ ಸಲುವಾಗಿ ನಂಜಾವಧೂತ ಸ್ವಾಮೀಜಿ ಕೋಡಿಹಳ್ಳಿಯಲ್ಲಿರುವ ಡಿ.ಕೆ. ಸುರೇಶ್ ನಿವಾಸಕ್ಕೆ ಭೇಟಿ ನೀಡಿ ಡಿಕೆ ಸಹೋದರರ ತಾಯಿ ಗೌರಮ್ಮ ಅವರಿಗೆ ಧೈರ್ಯ ತುಂಬಿದರು. ಕನಕಪುರ ತಾಲೂಕಿನ ಕೋಡಿಹಳ್ಳಿಯಲ್ಲಿರುವ ನಿವಾಸಕ್ಕೆ ಭೇಟಿ ನೀಡಿದ್ದ ಶ್ರೀಗಳು ಎಲ್ಲವನ್ನುಎರಡು ದಿನಗಳಿಂದ ಮಾಧ್ಯಮಗಳಲ್ಲಿ ವೀಕ್ಷಿಸುತ್ತಿದ್ದೇನೆ. ಡಿಕೆಶಿ ಎಲ್ಲಾ ಜಾತಿ ಜನಾಂಗದವರ ಸೇವೆ ಮಾಡಿ ಪ್ರೀತಿ ಗಳಿಸಿದ್ದಾರೆ. ಅವರ ಸೇವೆ ನಿಜಕ್ಕೂ ಸಾರ್ಥಕ. ಅವರಿಗೆ ಬಂದೊದಗಿರುವ ಸಂಕಷ್ಟದಿಂದ ಬೇಸರವಾಗಿದೆ. ಎಂದು ಸ್ವಾಮೀಜಿ ಹೇಳಿದ್ರು. ಇದೇ ವೇಳೆ ಡಿಕೆಶಿ ಅಭಿಮಾನಿಗಳು ಸಂಯಮ ಕಳೆದುಕೊಳ್ಳದೇ ಶಾಂತಿ ಕಾಪಾಡುವಂತೆ ಕಿವಿಮಾತು ಹೇಳಿದ್ರು.