ಪ್ಲಾಸ್ಟಿಕ್ ಬಳಕೆ ತಡೆಗೆ ವಿಜಯಪುರ ಪಾಲಿಕೆ ಮಾಡಿತು ಒಂದ್ ಐಡಿಯಾ..
ವಿಜಯಪುರ:ಪರಿಸರಕ್ಕೆ ಹಾನಿ ತಡೆಗಟ್ಟಲು ಪ್ಲಾಸ್ಟಿಕ್ ಬಾಟಲ್ ನೀಡಿ, ಚಹಾ ಕುಡಿಯಿರಿ ಎಂಬ ಘೋಷದೊಂದಿಗೆ ವಿಜಯಪುರ ಮಹಾನಗರ ಪಾಲಿಕೆ ನಗರದಲ್ಲಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ತಡೆಯಲು ಹೊಸ ಪ್ರಯೋಗ ಮಾಡಿದೆ. ಸಾರ್ವಜನಿಕರು ಉಪಯೋಗಿಸಿ ಎಸೆಯುತ್ತಿದ್ದ ನೀರಿನ ಬಾಟಲ್‌ಗಳನ್ನ ನಗರದ ಇಂದಿರಾ ಕ್ಯಾಂಟೀನ್ಗಳಲ್ಲಿ ಕೊಟ್ಟು ಉಚಿತವಾಗಿ ಚಹಾ ಕುಡಿಯುವ ಯೋಜನೆ ರೂಪಿಸಿದೆ. ಪ್ಲಾಸ್ಟಿಕ್ ಬಳಕೆಯಿಂದ ಸಾಕಷ್ಟು ಸಮಸ್ಯೆಗಳು ಸೃಷ್ಟಿಯಾಗ್ತವೆ. ಹಾಗಾಗಿ ಪ್ಲಾಸ್ಟಿಕ್ ತಡೆಗೆ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಮುಂದಾಗಿದೆ.