ಮಾಸ್ಕ್ ಧರಿಸದವರಿಗೆ ದಂಡದ ಬದಲು ಗುಲಾಬಿ ಹೂ.. ನೆಲಮಂಗಲ ಪೊಲೀಸರಿಂದ ವಿಶಿಷ್ಟ ಜಾಗೃತಿ - ನೆಲಮಂಗಲ ಪೊಲೀಸರಿಂದ ಕೊರೊನಾ ಜಾಗೃತಿ
ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ನೆಲಮಂಗಲ ಪೊಲೀಸರು, ಗೃಹ ರಕ್ಷಕ ದಳದ ಸಿಬ್ಬಂದಿ ಜೊತೆ ಸೇರಿ ಜಾಗೃತಿ ಮೂಡಿಸುತ್ತಿದ್ದಾರೆ. ಮಾಸ್ಕ್ ಧರಿಸದೆ ಓಡಾಡುತ್ತಿದ್ದ ಜನರಿಗೆ ದಂಡ ಹಾಕುವ ಬದಲಿಗೆ ಗುಲಾಬಿ ಹೂ ಕೊಟ್ಟು ಜಾಗೃತಿ ಮೂಡಿಸಿದರು. ಕೊರೊನಾ ವೈರಸ್ ವಿರುದ್ಧ ಜಾಗೃತಿ ಮೆರವಣಿಗೆ ನಡೆಸಿದ ಅವರು ರಸ್ತೆಯಲ್ಲಿ ಮಾಸ್ಕ್ ಧರಿಸದೆ ಓಡಾಡುತ್ತಿದ್ದ ಕೆಲಸಗಾರರು, ಆಟೋಚಾಲಕರು, ಬೀದಿ ಬದಿಯ ವ್ಯಾಪಾರಸ್ಥರು ಮತ್ತು ಸಾರ್ವಜನಿಕರಿಗೆ ಗುಲಾಬಿ ಹೂ ನೀಡಿ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ತಿಳುವಳಿಕೆ ಹೇಳಿದರು. ಮಾಸ್ಕ್ ಧರಿಸದೆ ಓಡಾಡುತ್ತಿದ್ದ ಜನರಿಗೆ ದಂಡ ಹಾಕುತ್ತಿದ್ದ ಪೊಲೀಸರು ಇವತ್ತು ಗುಲಾಬಿ ಹೂ ಕೊಟ್ಟು ಅರಿವು ಮೂಡಿಸಿದ್ದು ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ.