ನಿರಾಶ್ರಿತರ ಭೇಟಿಗೆ ಬಂದಿದ್ದ ಶಾಸಕ ಮಹಾದೇವಪ್ಪ ಯಾದವಾಡ ವಿರುದ್ಧ ಆಕ್ರೋಶ - ಬೆಳಗಾವಿ ಲೇಟೆಸ್ಟ್ ಪ್ರೊಟೆಸ್ಟ್ ನ್ಯೂಸ್
ಬೆಳಗಾವಿ: ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ ಅವರಿಗೆ ನೆರೆ ಸಂತ್ರಸ್ತರು ಘೇರಾವ್ ಹಾಕಿದ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸುರೇಬಾನ್ ಪರಿಹಾರ ಕೇಂದ್ರದಲ್ಲಿ ನಡೆದಿದೆ. ಶೆಡ್ ನಿರ್ಮಿಸಿ ಕೊಡದೇ ಪೊಳ್ಳು ಭರವಸೆ ನೀಡುತ್ತಿದ್ದೀರಿ ಎಂದು ನಿರಾಶ್ರಿತರ ಭೇಟಿಗೆ ಬಂದಿದ್ದ ಶಾಸಕ ಮಹಾದೇವಪ್ಪ ಯಾದವಾಡ ಅವರನ್ನು ಸಂತ್ರಸ್ತರು ತೀವ್ರ ತರಾಟೆಗೆ ತೆಗೆದುಕೊಂಡರು. ಈ ಹಿಂದೆ ಸಿಎಂ ಬಂದಾಗ ಶೆಡ್ಡುಗಳನ್ನು ನಿರ್ಮಿಸಿ ಕೊಡುವುದಾಗಿ ಶಾಸಕ ಯಾದವಾಡ ಭರವಸೆ ನೀಡಿದ್ದರು. ಪರಿಹಾರ ಕೇಂದ್ರದಲ್ಲಿ ಯಾವುದೇ ವ್ಯವಸ್ಥೆ ಮಾಡದ ಹಿನ್ನಲೆಯಲ್ಲಿ ಆಕ್ರೋಶಗೊಂಡ ನೆರೆ ಸಂತ್ರಸ್ತರು ಶಾಸಕರ ಮುಂದೆ ಧರಣಿ ಕುಳಿತು ಧಿಕ್ಕಾರ ಕೂಗಿ ಸೌಕರ್ಯ ಒದಗಿಸುವಂತೆ ಒತ್ತಾಯಿಸಿದರು.