ಕೆಲವರು ರಾಜ್ಯಕ್ಕೆ, ಜಿಲ್ಲೆಗೆ ಮಂತ್ರಿಗಳಾಗಿಲ್ಲ, ಕೇವಲ ತಾಲೂಕಿಗೆ ಮಾತ್ರ ಸೀಮಿತ: ನೆಹರು ಓಲೇಕಾರ - ಮಂತ್ರಿ ಸ್ಥಾನ ಆಕಾಂಕ್ಷಿಗಳ ಬಗ್ಗೆ ನೆಹರು ಓಲೇಕಾರ್ ಪ್ರತಿಕ್ರಿಯೆ
ಮೊದಲ ಬಾರಿ ಶಾಸಕರಾದವರಿಗೂ ಮಂತ್ರಿ ಆಗಬೇಕು ಅನ್ನೋದು ಈಗ ಬೆಳೆದು ಬಿಟ್ಟಿದೆ ಎಂದು ಹಾವೇರಿಯಲ್ಲಿ ಶಾಸಕ ನೆಹರು ಓಲೇಕಾರ ಹೇಳಿಕೆ ನೀಡಿದ್ದಾರೆ. ಬಹಳ ಜನರಿಗೆ ನಾನೂ ಆಗಬೇಕು, ನಾನೂ ಆಗಬೇಕು ಎಂಬುದು ಇರುತ್ತೆ. ಕೆಲವು ಮಂತ್ರಿಗಳು ರಾಜ್ಯಕ್ಕೆ ಮಂತ್ರಿಗಳಾಗಿಲ್ಲ, ಜಿಲ್ಲೆಗೆ ಮಂತ್ರಿಗಳಾಗಿಲ್ಲ, ಕೇವಲ ತಾಲೂಕಿಗೆ ಮಾತ್ರ ಸೀಮಿತವಾಗಿದ್ದಾರೆ. ಅಂತಹವರನ್ನ ಕೈಬಿಟ್ಟು ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು ಎಂದ್ರು .ಇನ್ನು ಉದ್ಧವ್ ಠಾಕ್ರೆ ಉದ್ಧಟತನದ ಕುರಿತು ಪ್ರತಿಕ್ರಿಯಿಸಿ, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಗೆ ಮಾಡಲು ಕೆಲಸವಿಲ್ಲ, ಮತ್ತೆ ಕರ್ನಾಟಕವನ್ನ ಕೆಣಕೋ ಕೆಲಸ ಮಾಡ್ತಿದ್ದಾರೆ. ಬೆಳಗಾವಿಯನ್ನ ರಾಜ್ಯ ಸರಕಾರ ಎರಡನೇ ರಾಜಧಾನಿ ಅಂತಾ ಘೋಷಣೆ ಮಾಡಿದೆ. ಠಾಕ್ರೆ ಚುನಾವಣೆ ಗಿಮಿಕ್ ಮಾಡ್ತಿದ್ದಾರೆ. ಈ ರೀತಿಯ ನೀತಿಗೆಟ್ಟ ಹೇಳಿಕೆಗಳನ್ನ ಕೊಡೋ ಕೆಲಸ ಮಾಡಬಾರ್ದು ಎಂದು ಗುಡುಗಿದ್ರು.