ಕಳಸಾ ಬಂಡೂರಿ ನಾಲಾ ಜೋಡಣೆ ಟೆಂಡರ್ ಕರೆಯಲು ಒತ್ತಾಯಿಸಿ ಪ್ರತಿಭಟನೆ - nawalgunda-bund-massive-protest
ಧಾರವಾಡ: ಮಹಾದಾಯಿ ಕಳಸಾ ಬಂಡೂರಿ ನಾಲಾ ಜೋಡಣೆ ಕಾಮಗಾರಿಗೆ ಬೇಗ ಟೆಂಡರ್ ಕರೆಯಲು ಒತ್ತಾಯಿಸಿ, ಕಳಸಾ ಬಂಡೂರಿ ರೈತ ಕಾರ್ಮಿಕರ ಹೋರಾಟ ಒಕ್ಕೂಟದ ವತಿಯಿಂದ ಚಕ್ಕಡಿ ಮೆರವಣಿಗೆ ಮಾಡಿ ಪ್ರತಿಭಟನೆ ನಡೆಸಲಾಯಿತು. ಅಲ್ಲದೇ ಪೆಟ್ರೋಲ್, ಡೀಸೆಲ್, ಇಂಧನಗಳ ಬೆಲೆ ಕಡಿಮೆ ಮಾಡಬೇಕು, ರೈತ ವಿರೋಧಿ ಕೃಷಿ ಕಾಯ್ದೆ ಹಿಂಪಡೆಯಬೇಕು, ಬೆಳೆ ಹಾನಿ ಪರಿಹಾರ ನೀಡಬೇಕು ಮತ್ತು ನವಲಗುಂದದಲ್ಲಿ ರೈತ ಸಂಪರ್ಕ ಕೇಂದ್ರ ಪ್ರಾರಂಭಿಸಬೇಕು ಎಂಬ ಹಲವು ಬೇಡಿಕೆಗಳನ್ನಿಟ್ಟುಕೊಂಡು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಯಿತು.