ನವರಾತ್ರಿ ಉತ್ಸವ: ಧನಲಕ್ಷ್ಮಿ ಅಲಂಕಾರದಿಂದ ಕಂಗೊಳಿಸಿದ ದಸರಿಘಟ್ಟ ಚೌಡೇಶ್ವರಿ ದೇವಿ
ತುಮಕೂರು: ನಾಡಿನೆಲ್ಲೆಡೆ ಶಕ್ತಿದೇವತೆಗಳನ್ನು ನವರಾತ್ರಿಯ ಈ ಸಂದರ್ಭದಲ್ಲಿ ವಿವಿಧ ರೀತಿಯಲ್ಲಿ ಅಲಂಕರಿಸಿ ಪೂಜಿಸಲಾಗುತ್ತದೆ. ಅದೇ ರೀತಿ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ದಸರಿಘಟ್ಟ ಗ್ರಾಮದ ಶ್ರೀ ಚೌಡೇಶ್ವರಿ ದೇವಿಯ ಆರಾಧನೆಯನ್ನು ಮಾಡಲಾಗುತ್ತಿದ್ದು ಪ್ರತಿ ದಿನ ವಿವಿಧ ರೀತಿಯಲ್ಲಿ ಅಲಂಕಾರಗಳನ್ನು ಮಾಡಿ ಪೂಜಿಸಲಾಗುತ್ತಿದೆ. ನಿಂಬೆ ಹಣ್ಣಿನ ಅಲಂಕಾರ , ವೀಳ್ಯದೆಲೆ ಅಲಂಕಾರ, ಧನಲಕ್ಷ್ಮಿ ಅಲಂಕಾರ , ಸರಸ್ವತಿ ಅಲಂಕಾರ, ಗಾಯತ್ರಿ ಅಲಂಕಾರ, ಬಳೆ ಅಲಂಕಾರ, ಮಹಿಷಾಸುರ ಮರ್ದಿನಿ ಅಲಂಕಾರವನ್ನು ಶ್ರೀ ಚೌಡೇಶ್ವರಿ ದೇವಿಗೆ ಮಾಡಿ ಭಕ್ತಿಯಿಂದ ನಿತ್ಯ ಪೂಜಿಸಲಾಗುತ್ತಿದೆ.