ಕೊರೊನಾ ನಿಯಮ ಪಾಲಿಸಿ ಗುಡಗೇರಿ ದ್ಯಾಮವ್ವ ದೇವಿಗೆ ಶರನ್ನವರಾತ್ರಿ ಪೂಜೆ - gudigeri dyamavva
ಹುಬ್ಬಳ್ಳಿ: ಸಂತ ಶಿಶುನಾಳ ಶರೀಫರಿಗೆ ಮೂಗುತಿ ನೀಡಿದ ಪವಾಡ ರೂಪಿಣಿ ಕುಂದಗೋಳ ತಾಲೂಕಿನ ಗುಡಗೇರಿ ದ್ಯಾಮವ್ವ ದೇವಿಗೆ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಪ್ರತಿದಿನ ವಿಧ ವಿಧವಾದ ಹೂವಿನ ಅಲಂಕಾರ, ಪೂಜಾಭಿಷೇಕ ಸೇರಿದಂತೆ ಹೋಮ ಹವನ ನಡೆಯುತ್ತಿದೆ. ದೇವಾಲಯ ಕಮಿಟಿಯಿಂದ ಕೊರೊನಾ ನಿಯಮ ಪಾಲಿಸಲಾಗಿದೆ. ಭಕ್ತರಿಗೆ ಮಾಸ್ಕ್ ಜತೆಗೆ ಕೈಗಳಿಗೆ ಸ್ಯಾನಿಟೈಜರ್ ಸಿಂಪಡಿಸಿ ಸಾಮಾಜಿಕ ಅಂತರದ ನಡುವೆ ಸತತ 7 ದಿನಗಳಿಂದ ಪೂಜೆ ನೆರವೇರಿಸಲಾಗುತ್ತಿದೆ.