ವಿಶೇಷ ಅಲಂಕಾರದಲ್ಲಿ ಕಂಗೊಳಿಸುತಿಹಳು ತಾಯಿ ಚಾಮುಂಡಿ; ತುಮಕೂರಿನಲ್ಲಿ ನವರಾತ್ರಿ ಸಡಗರ - ಕುಂಕುಮ ಅಲಂಕಾರ
ನಾಡಿನೆಲ್ಲೆಡೆ ನವರಾತ್ರಿ ಸಂಭ್ರಮ ಕಳೆಗಟ್ಟಿದೆ. ತುಮಕೂರಿನಲ್ಲೂ ಜನ ಹಬ್ಬದ ಸಡಗರ ಸಂಭ್ರಮದಲ್ಲಿದ್ದಾರೆ. ನಗರದ ಪ್ರಮುಖ ದೇವಾಲಯಗಳಾದ ಮಹಾಲಕ್ಷ್ಮಿ, ಚಾಮುಂಡೇಶ್ವರಿ, ಏಕನಾಥೇಶ್ವರಿ ದೇವಾಲಯಗಳಲ್ಲಿ ನವರಾತ್ರಿಯ ಅಂಗವಾಗಿ ವಿಶೇಷ ಅಲಂಕಾರ, ಪೂಜಾ ಕೈಂಕರ್ಯಗಳು ನೆರವೇರುತ್ತಿವೆ. ದೇಗುಲಗಳಲ್ಲಿ ದುರ್ಗೆಗೆ ಅರಿಶಿಣ ಕುಂಕುಮ, ಹೆಸರುಕಾಳು, ಅಕ್ಕಿ, ದಾಳಿಂಬೆ ಹಣ್ಣುಗಳ ಮೂಲಕ ವಿಶೇಷ ಅಲಂಕಾರ ಮಾಡಲಾಗುತ್ತಿದ್ದು ಭಕ್ತರು ದರ್ಶನ ಪಡೆದು ಪುನೀತರಾಗ್ತಿದ್ದಾರೆ.