Watch: ನವರಾತ್ರಿ ಪೂಜೆಗೆ ಅಲಂಕಾರಗೊಂಡ ಚಾಮುಂಡಿ ತಾಯಿ ಉತ್ಸವ ಮೂರ್ತಿ, ಹೇಗಿದೆ ಸಿದ್ಧತೆ?
ನವರಾತ್ರಿಯ ಮೊದಲ ದಿನ ಚಾಮುಂಡಿ ಬೆಟ್ಟದಲ್ಲಿ ವೃಶ್ಚಿಕ ಲಗ್ನದಲ್ಲಿ ನಾಡ ಹಬ್ಬ ದಸರಾಗೆ, ಬೆಳ್ಳಿ ರಥದಲ್ಲಿ ಇರುವ ನಾಡ ದೇವತೆ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ವಿದ್ಯುಕ್ತ ಚಾಲನೆ ನೀಡಲಾಗುವುದು. ಈ ಬಗ್ಗೆ ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶಶಿಧರ್ ದೀಕ್ಷಿತ್ ಈ ಟಿವಿ ಭಾರತ್ ಜೊತೆ ಮಾತನಾಡಿ, ನಾಡಿನ ಜನತೆಗೆ ನವರಾತ್ರಿ ಹಬ್ಬದ ಶುಭಾಶಯಗಳು, ನವರಾತ್ರಿ ಹಬ್ಬ ಬಹಳ ವಿಶೇಷ ಹಬ್ಬ. 9 ದಿನಗಳ ಕಾಲ ದುರ್ಗೆಯ ಆರಾಧನೆ ಮಾಡಲಾಗುತ್ತದೆಯೆಂದರು. ನವರಾತ್ರಿಯ ಮೊದಲ ದಿನ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿಗೆ ಬೆಳಿಗ್ಗೆ ರುದ್ರಾಭೀಷೇಕ, ಪಂಚಾಭಿಷೇಕ, ಯಂತ್ರ ಪೂಜೆ, ದುರ್ಗಾಚನೆ ಮಾಡುವುದು ನವರಾತ್ರಿಯ ವಿಶೇಷ. ಜೊತೆಗೆ ಬೆಳಿಗ್ಗೆ 9:39 ರಿಂದ 10:29 ರವರೆಗೆ ಜರುಗುವ ವೃಶ್ಚಿಕ ಲಗ್ನದಲ್ಲಿ ದಸರಾಗೆ ಮುಖ್ಯಮಂತ್ರಿಗಳು ಹಾಗೂ ಸಾಹಿತಿ ಎಸ್.ಎಲ್.ಭೈರಪ್ಪ ಪುಷ್ಪಾರ್ಚನೆ ಮಾಡುವ ಮೂಲಕ ನವರಾತ್ರಿಗೆ ಚಾಲನೆ ಸಿಗಲಿದೆಯೆಂದರು.