ಕರ್ನಾಟಕ

karnataka

ETV Bharat / videos

ಆದಿವಾಸಿ ನೃತ್ಯ ಮಹೋತ್ಸವ: ಛತ್ತೀಸ್​ಗಢ​ದಲ್ಲಿ ಕೊಡವರ ಸಂಸ್ಕೃತಿ ಪ್ರದರ್ಶನ - Karnataka artist dance performance in Chhattisgarh,

By

Published : Dec 27, 2019, 5:39 PM IST

ಛತ್ತೀಸ್​ಗಢ್​ನ ರಾಯ್ಪುರ್​ನ ವಿಜ್ಞಾನ ಕಾಲೇಜ್​ನಲ್ಲಿ ರಾಷ್ಟ್ರೀಯ ಆದಿವಾಸಿ ನೃತ್ಯ ಮಹೋತ್ಸವ ಆರಂಭವಾಗಿದೆ. ಮೂರು ದಿನಗಳ ಕಾಲ ನಡೆಯುವ ಈ ಮಹೋತ್ಸವದಲ್ಲಿ ದೇಶ-ವಿದೇಶದಿಂದ ಬಂದಿರುವ ಕಲಾವಿದರು ಆದಿವಾಸಿ ಸಂಸ್ಕೃತಿಯನ್ನು ಪ್ರದರ್ಶಿಸಲಿದ್ದಾರೆ. ಅದರಂತೆ ರಾಜ್ಯದ ಕೊಡಗಿನ ಕುವರಿಯರು ತಮ್ಮ ನೃತ್ಯ ಪ್ರದರ್ಶಿಸಲಿದ್ದಾರೆ. ಹೌದು, ಕೊಡಗಿನಿಂದ ತೆರಳಿರುವ ಕಲಾವಿದರು ಆದಿವಾಸಿ ನೃತ್ಯ ಮಹೋತ್ಸವದಲ್ಲಿ ತಮ್ಮ ಪಾರಂಪರಿಕ ನೃತ್ಯವನ್ನು ಪ್ರದರ್ಶಿಸಲಿದ್ದಾರೆ. ಇನ್ನು ಕೊಡಗಿನ ಕುವರಿಯರು ಕಾಫಿ ಬೆಳೆ ಸೇರಿದಂತೆ ಇನ್ನಿತರ ಧಾನ್ಯಗಳ ಬಿತ್ತನೆ ನಂತರ ಮೂರು ದಿನಗಳ ಕಾಲ ನಡೆಯುವ ಖುಷಿ ಸಂದರ್ಭವನ್ನು ನೃತ್ಯದ ಮೂಲಕ ತೋರಿಸಲಿದ್ದಾರೆ. ಈಗಾಗಲೇ ಆದಿವಾಸಿ ನೃತ್ಯ ಮಹೋತ್ಸವ ಪ್ರಾರಂಭವಾಗಿದ್ದು, ಇಂದು ಅಥವಾ ನಾಳೆ ಕೊಡಗಿನ ಕುವರಿಯರು ಸೇರಿದಂತೆ ಕರ್ನಾಟಕದಿಂದ ತೆರಳಿರುವ ಕಲಾವಿದರು ತಮ್ಮ ನೃತ್ಯ ಪ್ರದರ್ಶಿಸಲಿದ್ದಾರೆ.

ABOUT THE AUTHOR

...view details