ಕರ್ನಾಟಕ

karnataka

ETV Bharat / videos

ಫೆ. 6 ರಂದು ರಾಷ್ಟ್ರೀಯ ಹೆದ್ದಾರಿಗಳು ಬಂದ್: ಬಡಗಲ ಪುರ ನಾಗೇಂದ್ರ - Badagalapura Nagendra

By

Published : Feb 3, 2021, 7:38 PM IST

ಮೈಸೂರು: ರೈತರ ವಿರುದ್ಧ ಕೇಂದ್ರ ಸರ್ಕಾರದ ಅಮಾನವೀಯ ವರ್ತನೆ ಖಂಡಿಸಿ ಫೆ. 6 ರಂದು ರಾಜ್ಯಾದ್ಯಂತ ಸಂಯುಕ್ತ ಹೋರಟ ಸಮಿತಿ ರಸ್ತೆ ಬಂದ್ ನಡೆಸಲಿದೆ ಎಂದು ರೈತ ಸಂಘದ ಹಸಿರು ಸೇನೆಯ ರಾಜ್ಯಾಧ್ಯಕ್ಷ ಬಡಗಲ ಪುರ ನಾಗೇಂದ್ರ ಹೇಳಿದ್ದಾರೆ. ಇಂದು ಈಟಿವಿ ಭಾರತದ ಜೊತೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಹತಾಶ ಭಾವನೆಯಿಂದ ಮಾನವ ಹಕ್ಕು, ಮೂಲ ಹಕ್ಕುಗಳನ್ನು ದಮನ ಮಾಡಲು ಹೊರಟಿದೆ. ರೈತರೊಂದಿಗೆ ಅಮಾನವೀಯವಾಗಿ ವರ್ತಿಸಿದೆ. ರೈತ ಹೋರಾಟದ ಸ್ಥಳದಲ್ಲಿ ಇಂಟರ್​​ನೆಟ್, ನೀರು ಕಟ್ ಮಾಡಿದೆ, ರಸ್ತೆಗೆ ಮುಳ್ಳಿನ ತಂತಿ ಹಾಕಿದೆ. ಇದನ್ನು ಪ್ರತಿಭಟಿಸಿ ರಾಜ್ಯದಲ್ಲಿ ಎಲ್ಲ ಸಂಘಟನೆಗಳು ಸಂಯುಕ್ತ ಹೋರಾಟ ಸಮಿತಿಯ ಹೆಸರಿನಲ್ಲಿ ರಾಜ್ಯಾದ್ಯಂತ, ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ತಾಲೂಕು ಪ್ರಮುಖ ರಸ್ತೆಗಳನ್ನು ಮಧ್ಯಾಹ್ನ 12 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಬಂದ್ ಮಾಡುತ್ತೇವೆ ಎಂದು ಬಡಗಲ ಪುರ ನಾಗೇಂದ್ರ ಹೇಳಿದ್ದಾರೆ.

ABOUT THE AUTHOR

...view details