ಕರ್ನಾಟಕ

karnataka

ETV Bharat / videos

ಸಂಸದ ನಾರಾಯಣಸ್ವಾಮಿಗೆ ಪೆಮ್ಮನಹಳ್ಳಿ ಪ್ರವೇಶ ನಿರಾಕರಣೆ ಪ್ರಕರಣ: ಜಿಲ್ಲಾಡಳಿತದಿಂದ ಜಾಗೃತಿ - MP Narayanaswamy

By

Published : Sep 18, 2019, 9:50 PM IST

Updated : Sep 18, 2019, 11:05 PM IST

ತುಮಕೂರು: ಚಿತ್ರದುರ್ಗ ಸಂಸದ ನಾರಾಯಣಸ್ವಾಮಿಗೆ ಪಾವಗಡ ತಾಲೂಕಿನ ಪೆಮ್ಮನಹಳ್ಳಿಯ ಗೊಲ್ಲರಹಟ್ಟಿಗೆ ಪ್ರವೇಶ ನಿರಾಕರಿಸಿರುವ ಹಿನ್ನೆಲೆ, ಇಂದು ಜಿಲ್ಲಾಧಿಕಾರಿ ರಾಕೇಶ್ ಕುಮಾರ್​ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿ ಕೃಷ್ಣ ಹಾಗೂ ಜಿಲ್ಲಾ ಸಿಇಒ ಶುಭ ಕಲ್ಯಾಣ್ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಿದರು. ಇದೇ ವೇಳೆ ಸಭೆ ನಡೆಸಿ ಮಾತಾನಾಡಿದ ಜಿಲ್ಲಾಧಿಕಾರಿ ರಾಕೇಶ್​ ಕುಮಾರ್ ಅವರು​, ಮೂಢನಂಬಿಕೆ ಹೋಗಲಾಡಿಸಬೇಕಿದೆ. ಇದು ಕೇವಲ ಸಂಸದ ನಾರಾಯಣಸ್ವಾಮಿ ಅವರಿಗೆ ಮಾತ್ರವಲ್ಲ. ಪ್ರತಿಯೊಬ್ಬರಿಗೂ ಎಲ್ಲಾ ದೇವಸ್ಥಾನಗಳು ಮತ್ತು ಗ್ರಾಮಗಳಿಗೆ ಪ್ರವೇಶಿಸುವ ಮುಕ್ತ ಅವಕಾಶವನ್ನು ಕಲ್ಪಿಸಿ ಕೊಡುವಂತಹ ವಾತಾವರಣ ನಿರ್ಮಿಸಬೇಕಿದೆ. ಈ ಮೂಲಕ ಜನರಲ್ಲಿ ಜಾಗೃತಿ ಮೂಡಬೇಕಿದೆ ಎಂದರು.
Last Updated : Sep 18, 2019, 11:05 PM IST

ABOUT THE AUTHOR

...view details