ಸಿದ್ದಗಂಗಾ ಮಠದಲ್ಲಿ ನವರಾತ್ರಿ ವಿಶೇಷ ...ಮಠದ ರಾಸುಗಳಿಗೆ ಪೂಜೆ - ವಚನಗಳು ಮತ್ತು ಉಪನಿಷತ್ತುಗಳ ಪಠಣೆ
ತುಮಕೂರು : ತ್ರಿವಿಧ ದಾಸೋಹಕ್ಕೆ ಹೆಸರಾಗಿರುವ ತುಮಕೂರಿನ ಶ್ರೀ ಸಿದ್ದಗಂಗಾ ಮಠದಲ್ಲಿ ಸಂಪ್ರದಾಯದಂತೆ ನವರಾತ್ರಿ ಆಚರಣೆ ನಡೆಸಿಕೊಂಡು ಬರಲಾಗುತ್ತಿದೆ. ನಿತ್ಯ ಸಂಜೆ ಸಾಮೂಹಿಕ ಪ್ರಾರ್ಥನೆಗೂ ಮುನ್ನ ವಚನಗಳು ಮತ್ತು ಉಪನಿಷತ್ತುಗಳನ್ನು ಪಠಣ ಮಾಡಲಾಗುತ್ತಿದೆ. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಠದ ವಿದ್ಯಾರ್ಥಿಗಳು ವಿಶೇಷ ಪ್ರಾರ್ಥನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ರೈತರ ಬೆನ್ನೆಲುಬಾಗಿರುವ ಮಠದ ರಾಸುಗಳನ್ನು ಸುಂದರವಾಗಿ ಅಲಂಕರಿಸಿ ಮಂಗಳಾರತಿ ಮಾಡಿ ಅವುಗಳಿಗೆ ಹಣ್ಣುಗಳನ್ನು ಕೊಡಲಾಗುವುದು. ಶ್ರೀ ಶಿವಕುಮಾರ ಸ್ವಾಮೀಜಿಯವರು ನಡೆಸಿಕೊಂಡು ಬಂದಂತಹ ಸಂಪ್ರದಾಯದಂತೆ ವಿಜಯದಶಮಿಯಂದು ಉತ್ಸವವನ್ನು ಕೂಡ ಆಯೋಜನೆ ಮಾಡಲಾಗಿದೆ ಎಂದು ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದ್ದಾರೆ.