'ಮನೆಯಲ್ಲಿಯೇ ನಮಾಜ್ ಮಾಡಿ': ಮೌಲ್ವಿಗಳಿಂದ ಜಾಗೃತಿ ಅಭಿಯಾನ - ಕೊರೊನಾ ವೈರಸ್ ಸೊಂಕು ನಿಯಂತ್ರಣಕ್ಕೆ ಕ್ರಮ
ಬೀದರ್ : ಕೊರೊನಾ ವೈರಸ್ ಸೊಂಕು ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಲಾಕ್ಡೌನ್ ಘೋಷಣೆ ಮಾಡಿರುವ ಹಿನ್ನೆಲೆ ಮುಸ್ಲಿಂ ಸಮುದಾಯದವರು ಮಸೀದಿಯಲ್ಲಿ ಸಾಮೂಹಿಕ ನಮಾಜ್ ಮಾಡುವುದು ಬೇಡ. ಬದಲಾಗಿ ಮನೆಯಲ್ಲಿ ನಮಾಜ್ ಮಾಡಿ ಪ್ರಾರ್ಥಿಸುವಂತೆ ಮೌಲ್ವಿಗಳು ಜಾಗೃತಿ ಅಭಿಯಾನ ನಡೆಸಿದರು. ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಕ್ರಮ ಕೈಗೊಂಡಿದೆ. ನಾವೆಲ್ಲರೂ ಸಹಕರಿಸಬೇಕಾಗಿದೆ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.