ಕರ್ನಾಟಕ

karnataka

ETV Bharat / videos

ಅಂಕೋಲಾದಲ್ಲಿ ನಾಮಧಾರಿ ದಹಿಂಕಾಲ ಉತ್ಸವ... ಗಮನ ಸೆಳೆದ ಕಲಾ ತಂಡಗಳ ಪ್ರದರ್ಶನ - ಲೆಟೆಸ್ಟ್ ಅಂಕೋಲಾ ಕಾರವಾರ ಹಬ್ಬದ ನ್ಯೂಸ್

By

Published : Nov 23, 2019, 11:09 AM IST

ಅಂಕೋಲಾದಲ್ಲಿ ಪ್ರತಿ ವರ್ಷದಂತೆ ನಾಮಧಾರಿ ದಹಿಂಕಾಲ ಉತ್ಸವ ಅದ್ಧೂರಿಯಾಗಿ ನಡೆಯಿತು. ಮೊದಲು ವೆಂಕಟರಮಣ ದೇವರಿಗೆ ಅಭಿಷೇಕ ಮಾಡಲಾಯಿತು. ಬಳಿಕ ಮಾರುಕಟ್ಟೆ ಬಳಿ ಇರುವ ಶಾಂತದುರ್ಗಾ ದೇವರ ರಥೋತ್ಸವಕ್ಕೆ ಪೂಜೆ ಸಲ್ಲಿಸಿ ಅಲ್ಲಿಂದ ಮೆರವಣಿಗೆಗೆ ಚಾಲನೆ ನೀಡಲಾಯಿತು. ಈ ವೇಳೆ ರಾಜ್ಯದ ವಿವಿಧ ಭಾಗಗಳಿಂದ ಬಂದ ಕಲಾ ತಂಡಗಳು ತಮ್ಮ ಕಲೆ ಪ್ರದರ್ಶಿಸಿದವು. ಮೆರವಣಿಗೆಯಲ್ಲಿ ಶ್ರೀ ತಿರುಪತಿ ತಿಮ್ಮಪ್ಪ ದೇವರ ಟ್ಯಾಬ್ಲೊ, ಹುಲಿವೇಷ, ತಟ್ಟಿರಾಯ, ಕೀಲು ಕುದುರೆ, ನವಿಲು ನತ್ಯ, ಹನುಮಂತ ವೇಷ ಮುಂತಾದ ಕಲಾ ತಂಡಗಳಿಂದ ನಡೆದ ಪ್ರದರ್ಶನ ಸಾರ್ವಜನಿಕರ ಗಮನ ಸೆಳೆದವು.

ABOUT THE AUTHOR

...view details