ಕರ್ನಾಟಕ

karnataka

ETV Bharat / videos

ಸುಪ್ರೀಂನಿಂದ ಉಪ ಚುನಾವಣೆ ಮುಂದೂಡಿಕೆ ವಿಚಾರ : ಹೆಚ್​​ಡಿಕೆ ಹೇಳಿಕೆಗೆ ಕಟೀಲ್ ತಿರುಗೇಟು - latest bangalore news

By

Published : Sep 26, 2019, 9:08 PM IST

ಕುಮಾರಸ್ವಾಮಿಯವರು ಅಧಿಕಾರದಲ್ಲಿದ್ದಾಗ ಚುನಾವಣೆ ಮುಂದೂಡಿಕೆ ಮಾಡಿಸಿದಂತಹ ಕೆಲಸ ಮಾಡಿರಬಹುದೇನೋ, ಆದರೆ ಬಿಜೆಪಿಗೆ ಇದರ ಅವಶ್ಯಕತೆಯಿಲ್ಲ ಎಂದು ಉಪ ಚುನಾವಣೆ ಮುಂದೂಡಿಕೆಯಲ್ಲಿ ಬಿಜೆಪಿ ಕೈವಾಡವಿದೆ ಎಂದು ಆರೋಪ ಮಾಡಿದ್ದ ಮಾಜಿ ಸಿಎಂ ಹೆಚ್​​ಡಿಕೆಗೆ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿರುಗೇಟು ನೀಡಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 15 ಕ್ಷೇತ್ರಗಳ ಉಪ ಚುನಾವಣೆಗೆ ಸುಪ್ರೀಂಕೋರ್ಟ್ ಇಂದು ತಡೆಯಾಜ್ಞೆ ಕೊಟ್ಟಿದ್ದು, ಇದನ್ನು ನಾವು ಸ್ವಾಗತಿಸುತ್ತೇವೆ ಎಂದರು. ಜೊತೆಗೆ ಉಪ ಚುನಾವಣೆ ಸಂಬಂಧ ಬೆಂಗಳೂರು ಹಾಗು ಹುಬ್ಬಳ್ಳಿಯಲ್ಲಿ ಸಭೆ ನಿಗದಿಯಾಗಿದ್ದು, ಚುನಾವಣೆ ಮುಂದೂಡಿಕೆಯಾಗಿದ್ದರೂ ಸಹ ನಾವು ಬಾಕಿ ಇರುವ ಸಂಘಟನಾತ್ಮಕ ಕೆಲಸಗಳನ್ನು ಮುಂದುವರಿಸುತ್ತೇವೆಂದು ಸ್ಪಷ್ಟಪಡಿಸಿದರು.

ABOUT THE AUTHOR

...view details