ನಾಗರಪಂಚಮಿ ಹಬ್ಬದ ಸಂಭ್ರಮಾಚರಣೆಯಲ್ಲಿ ಹಾವೇರಿ ಜನತೆ
ಹಾವೇರಿ: ರಾಜ್ಯದಾದ್ಯಂತ ನಾಗರಪಂಚಮಿ ಹಬ್ಬ ಆರಂಭವಾಗಿದ್ದು, ಇಂದು ಮತ್ತು ನಾಳೆ ನಾಗಪ್ಪನಿಗೆ ಹಾಲೆರೆಯಲಾಗುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಮಣ್ಣಿನ ನಾಗಪ್ಪಗಳ ಖರೀದಿ ಜೋರಾಗಿ ನಡೆಯುತ್ತಿದೆ. ನಗರದ ಪ್ರಮುಖ ಬೀದಿಗಳಲ್ಲಿ ಕುಂಬಾರರು ಮಣ್ಣಿನ ನಾಗಪ್ಪಗಳನ್ನ ತಯಾರಿಸಿ ಮಾರಾಟ ಮಾಡುತ್ತಿದ್ದ ದೃಶ್ಯ ಕಂಡುಬಂತು. ಕೆಲವರು ಇಂದು ನಾಗಬನಗಳಿಗೆ ತೆರಳಿ ಹಾಲೆರೆದರೆ ಇನ್ನು ಕೆಲವರು ಮನೆಯಲ್ಲಿ ಮಣ್ಣಿನ ನಾಗಪ್ಪಗೆ ಹಾಲೆರೆಯುತ್ತಾರೆ. ನಾಳೆ ಗಂಗಾ ಮಾತೆಗೆ ಪೂಜೆ ಸಲ್ಲಿಸುವ ಮೂಲಕ ನಾಗಪಂಚಮಿಗೆ ತೆರೆ ಬೀಳುತ್ತದೆ.