ಬಾಗಲಕೋಟೆ : ಕೊರೊನಾ ಭೀತಿಗೆ ಕಳೆದುಂದಿದ ನಾಗರ ಪಂಚಮಿ - ಬಾಗಲಕೋಟೆಯಲ್ಲಿ ನಾಗರ ಪಂಚಮಿ
ಕೊರೊನಾ ಭೀತಿ ಹಿನ್ನೆಲೆ ಅದ್ದೂರಿಯಾಗಿ ನಡೆಯುತ್ತಿದ್ದ ನಾಗರ ಪಂಚಮಿಯನ್ನು ಈ ಬಾರಿ ಸರಳವಾಗಿ ಆಚರಿಸಲಾಗಿದೆ. ಮಹಿಳೆಯರು, ಮಕ್ಕಳು ಸೇರಿ ನಾಗಾರಾಧನೆ ಮಾಡಿದ್ದಾರೆ. ಹುತ್ತಕ್ಕೆ ಹಾಲೆರೆದು ಪೂಜಿಸುತ್ತಿದ್ದಾರೆ. ಪ್ರತಿ ವರ್ಷ ಪಂಚಮಿ ಹಬ್ಬದಲ್ಲಿ ಸಂಭ್ರಮ ಮನೆ ಮಾಡುತ್ತಿತ್ತು. ಆದರೆ, ಈ ಬಾರಿ ಕೊರೊನಾ ಭೀತಿ ಹಿನ್ನೆಲೆ ಗುಂಪಾಗಿ ಸೇರದೆ ಮನೆ ಹತ್ತಿರದ ಕಲ್ಲಿನ ನಾಗಪ್ಪನ ಮೂರ್ತಿಗೆ ಪೂಜೆ ಸಲ್ಲಿಸಿದ್ದಾರೆ.