ಧಾರವಾಡ ಹೆಣ್ಮಕ್ಕಳ ಸಂಭ್ರಮ ಎಷ್ಟ್ ಚೆಂದ್ ಅಂತೇನ್ರೀ! - ಧಾರವಾಡದಲ್ಲಿ ನಾಗರ ಪಂಚಮಿಯ ಸಂಭ್ರಮ
ಮನೆ ಗೌರಿಯರೆಲ್ಲ ಒಂದ್ಕಡೆ ಸೇರ್ಕೊಂಡ್ ಬಿಟ್ಟಿದ್ರೀ.. ಹಂಗಾ ಸುಮ್ ಸುಮ್ಕಾ ಅವರೇನೂ ಅಲ್ಲಿ ಒಟ್ಟಾಗಿ ಕೂಡಿರಲಿಲ್ರೀ.. ನಾಳೆ ಹೆಂಗೂ ಐದಿತ್ಯವಾರ. ಇಂತಾದ್ರಾಗ್ ನಾಗರಪಂಚಮಿನೂ ಬಂದೈತಿ. ಅದಕ್ಕಾ ಎಲ್ಲರೂ ಒಂದ್ಕಡೆಗೆ ಕೂಡಿಕೊಂಡು ಹಬ್ಬ ಮಾಡ್ಯಾರ್‌ರೀ. ಅವರ ಸಂಭ್ರಮ ನೋಡ್ತಿದ್ರಾ ಹಂಗಾ ನೋಡ್ತಾನೆ ಇರಬೇಕು ಅನ್ಸುತ್ರೀ..