ದಸರಾ ಆಹಾರ ಮೇಳದಲ್ಲಿ ನಾಟಿ ವೈದ್ಯೆ ನಾಗಮ್ಮ: ಸರ್ವ ರೋಗಕ್ಕೂ ಇವರಲ್ಲಿದೆ ಔಷಧಿ! - ಮಡಿಕೇರಿ ಮೂಲದವರಾದ ನಾಗಮ್ಮ
ಮೈಸೂರು: ದಸರಾದ ಆಹಾರ ಮೇಳದಲ್ಲಿ ಮಡಿಕೇರಿ ಮೂಲದವರಾದ ನಾಗಮ್ಮ ಸರ್ವ ರೋಗಕ್ಕೂ ನಾಟಿ ಔಷಧ ನೀಡುತ್ತಿದ್ದಾರೆ. ಅನಕ್ಷರಸ್ಥೆ ಆಗಿರುವ ನಾಟಿ ವೈದ್ಯೆ ನಾಗಮ್ಮ ಕಾಡಿನಲ್ಲಿ ಸಿಗುವ ಹಲವಾರು ಗಿಡಮೂಲಿಕೆ ಔಷಧಿಗಳನ್ನು ತೆಗೆದುಕೊಂಡು ಬಂದು ರೋಗಿಗಳಿಗೆ ಕೊಡುತ್ತಿದ್ದಾರೆ. ಯಾವುದೇ ಹಣದ ಆಸೆ ಇಲ್ಲದೆ ಸುಮಾರು 20 ವರ್ಷಗಳಿಂದಲೂ ಕುಟುಂಬದ ಬಳುವಳಿಯಾಗಿ ಬಂದ ಈ ನಾಟಿ ವೈದ್ಯ ಕೆಲಸವನ್ನು ಚಾಚು ತಪ್ಪದೆ ಮಾಡುತ್ತಿದ್ದಾರೆ. ಇವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ಬಂದಿವೆ. ದಸರಾ ಆಹಾರ ಮೇಳದಲ್ಲಿ ಚಿಕ್ಕ ಅಂಗಡಿಯನ್ನು ಇಟ್ಟುಕೊಂಡಿರುವ ಇವರು ಎಲ್ಲಾ ರೋಗಗಳಿಗೂ ಔಷಧಿ ನೀಡುತ್ತಿದ್ದಾರೆ.