ಗ್ರಾಪಂ ಚುನಾವಣೆ: ಸೂಕ್ಷ್ಮ, ಅತಿಸೂಕ್ಷ್ಮ ಮತಗಟ್ಟೆಗಳಿಗೆ ಮೈಸೂರು ಎಸ್ಪಿ ಸಿ.ಬಿ. ರಿಷ್ಯಂತ್ ಭೇಟಿ - ಮತದಾನ ಕೇಂದ್ರಗಳಿಗೆ ಎಸ್ಪಿ ಭೇಟಿ
2ನೇ ಹಂತದ ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಸೂಕ್ಷ್ಮ, ಅತಿಸೂಕ್ಷ್ಮ ಮತಗಟ್ಟೆಗಳಿಗೆ ಭೇಟಿ ನೀಡಿದ್ದಾರೆ. ಮೈಸೂರು ತಾಲೂಕಿನ ಗುಂಗ್ರಾಲ್ ಛತ್ರ ಮತಗಟ್ಟೆಗೆ ಎಸ್ಪಿ ಸಿ.ಬಿ. ರಿಷ್ಯಂತ್ ಭೇಟಿ ನೀಡಿದ್ದು, ಮತದಾನ ಪ್ರಕ್ರಿಯೆ, ಬಂದೋಬಸ್ತ್ ಪರಿಶೀಲನೆ ನಡೆಸಿದ್ದಾರೆ. ಮತದಾನ ಹಿನ್ನೆಲೆ ಜಿಲ್ಲೆಯಲ್ಲಿ 1400 ಮಂದಿ ಪೊಲೀಸರು, 10 ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಲಾಗಿದೆ. ಕೋವಿಡ್ ಹಿನ್ನೆಲೆ ಗುಂಪುಗೂಡುವುದನ್ನ ತಡೆಯಲಾಗ್ತಿದೆ. ಮತದಾನ ಮಾಡಿದವರು ಮತಗಟ್ಟೆಗಳ ಬಳಿ ಜಮಾಯಿಸದೇ ತಕ್ಷಣ ಮನೆಗೆ ಹೋಗುವಂತೆ ಸೂಚಿಸಲಾಗ್ತಿದೆ ಎಂದು ಸಿ.ಬಿ. ರಿಷ್ಯಂತ್ ಹೇಳಿದ್ದಾರೆ.
Last Updated : Dec 27, 2020, 10:10 AM IST