ಮೈಸೂರು:ಹೊಸ ಬುಲೆಟ್ ಬೈಕ್ನಲ್ಲಿ ಅಡಗಿದ್ದ ಹಾವು ರಕ್ಷಣೆ - ಬುಲೆಟ್ ಬೈಕ್ನಲ್ಲಿ ಅಡಗಿದ್ದ ಹಾವು ರಕ್ಷಣೆ
ಮೈಸೂರು: ಬುಲೆಟ್ ಬೈಕ್ನಲ್ಲಿ ಅಡಗಿದ್ದ ಹಾವನ್ನು ರಕ್ಷಣೆ ಮಾಡಿ, ಕಾಡಿಗೆ ಬಿಟ್ಟಿರುವ ಘಟನೆ ನಗರದಲ್ಲಿ ನಡೆದಿದೆ. ನಗರದ ಕೆ. ಆರ್. ಎಸ್ ರಸ್ತೆಯಲ್ಲಿರುವ ಗೋಕುಲಂನ ನಿವಾಸಿ ಹೊಸ ರಾಯಲ್ ಎನ್ಫೀಲ್ಡ್ ಬೈಕ್ ಅನ್ನು ಖರೀದಿಸಿ ಮನೆ ಮುಂದೆ ನಿಲ್ಲಿಸಿದ್ದರು. ಬೈಕ್ ಒಳಗೆ ನುಸುಳಿ ಬುಸುಗುಡುತ್ತಿದ್ದ ಹಾವಿನ ಶಬ್ಧ ಕೇಳಿದ ಬೈಕ್ ಮಾಲೀಕ, ಸ್ನೇಕ್ ಸೂರ್ಯ ಕೀರ್ತಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸೂರ್ಯ ಕೀರ್ತಿ ಹಾವನ್ನು ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ.