ಮೈಸೂರು ಜಿಲ್ಲೆಯಲ್ಲಿ ಬಿರುಸಿನ ಮತದಾನ: ಪ್ರತ್ಯಕ್ಷ ವರದಿ - GP Election
ಮೈಸೂರು ಜಿಲ್ಲೆಯ 5 ತಾಲೂಕಿನಲ್ಲಿ ನಡೆಯುತ್ತಿರುವ ಮೊದಲ ಹಂತದ ಗ್ರಾಮ ಪಂಚಾಯತಿ ಚುನಾವಣೆ ಬಿರುಸಿನಿಂದ ಸಾಗಿದೆ. ಹೆಚ್ಡಿ ಕೋಟೆ, ಸರಗೂರು, ಪಿರಿಯಾಪಟ್ಟಣ, ಹುಣಸೂರು ಹಾಗೂ ಕೆ.ಆರ್.ನಗರ ತಾಲೂಕಿನ 148 ಗ್ರಾಮ ಪಂಚಾಯತಿಯ 949 ಕ್ಷೇತ್ರಗಳಲ್ಲಿ 2,180 ಸದಸ್ಯರ ಆಯ್ಕೆಗಾಗಿ ಮತದಾನ ನಡೆಯುತ್ತಿದೆ. 5 ತಾಲೂಕಿನಲ್ಲಿ 1184 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 7,22,019 ಮತದಾರರು ಮತ ಚಲಾಯಿಸಲಿದ್ದಾರೆ.