ದಸರಾ ದೀಪಾಲಂಕಾರ ನೋಡಲು ಮುಗಿಬಿದ್ದ ಜನ: ವಿಡಿಯೋ - ಮೈಸೂರು ಇತ್ತೀಚಿನ ಸುದ್ದಿ
ಮೈಸೂರು: ಸರಳ ದಸರಾದಲ್ಲಿ ಆಕರ್ಷಣೆಯ ದೀಪಾಲಂಕಾರ ನೋಡಲು ನಗರದ ಪ್ರಮುಖ ಸರ್ಕಲ್ಗಳಲ್ಲಿ ಜನಸಾಗರವೇ ಸೇರಿದ್ದು, ಇದರಿಂದ ಭಾನುವಾರ ರಾತ್ರಿ ಟ್ರಾಫಿಕ್ ಜಾಮ್ ಸಹ ಉಂಟಾಗಿತ್ತು. ಸಾಂಸ್ಕೃತಿಕ ನಗರಿಯಲ್ಲಿ ಈಗ ಸರಳ ದಸರಾದ ಸಂಭ್ರಮ ಮನೆ ಮಾಡಿದ್ದು, ನಗರದ ಪ್ರಮುಖ ಸರ್ಕಲ್ಗಳು ಹಾಗೂ ಅರಮನೆ ಸುತ್ತ ಆಕರ್ಷಣೆಯಾಗಿ ದೀಪಾಲಂಕಾರ ಮಾಡಲಾಗಿದೆ. ಇದನ್ನು ನೋಡಲು ಜನಸಾಗರವೇ ಹರಿದುಬರುತ್ತಿದೆ. ನಗರದ ಪ್ರಮುಖ ರಸ್ತೆಗಳಾದ ಕೆ.ಆರ್. ವೃತ್ತ, ದೇವರಾಜ ಮಾರುಕಟ್ಟೆ, ಸಯ್ಯಾಜಿ ರಾವ್ ರಸ್ತೆ, ಕೋಟೆ ಆಂಜನೇಯ ದೇವಸ್ಥಾನ ಮುಂಭಾಗ, ದೇವರಾಜ ಅರಸು ರಸ್ತೆ, ಅರಮನೆ ಮುಂಭಾಗದ ರಸ್ತೆಯಲ್ಲಿ ಭಾನುವಾರ ರಾತ್ರಿ ದೀಪಾಲಂಕಾರ ನೋಡಲು ಕುಟುಂಬದ ಜೊತೆ ಜನರು ಆಗಮಿಸಿದ್ದು, ಯುವಕ-ಯುವತಿಯರು ಲೈಟಿಂಗ್ ಜೊತೆಗೆ ಸೆಲ್ಫಿ ತೆಗೆದುಕೊಂಡು ಖುಷಿ ಪಡುತ್ತಿದ್ದು ಕಂಡು ಬಂದಿತ್ತು.