ಸಂಪಾಯಿತಲೇ ಪರಾಕ್! ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ ಭವಿಷ್ಯದ ನಿಗೂಢಾರ್ಥ ಏನು? - 20 ಅಡಿ ಬಿಲ್ಲೇನೇರಿದ ಗೊರವಪ್ಪ ಸಂಪಾತಲೇ ಪರಾಕ್ ಎಂದು ಭವಿಷ್ಯ
ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರದಲ್ಲಿ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ ನಡೆಯಿತು. 20 ಅಡಿ ಬಿಲ್ಲೇಯೇರಿದ ಗೊರವಪ್ಪ ರಾಮಪ್ಪ ಪ್ರಸ್ತುತ ವರ್ಷದ ಕಾರ್ಣಿಕ ನುಡಿದರು. 20 ಅಡಿ ಬಿಲ್ಲೇಯೇರಿದ ಗೊರವಪ್ಪ ಸಂಪಾಯಿತಲೇ ಪರಾಕ್ ಎಂದು ಭವಿಷ್ಯ ನುಡಿದು ಮೇಲಿನಿಂದ ದುಮುಕಿದರು. ಭಕ್ತರು ಅವರನ್ನು ಹಿಡಿದರು. ಗೊರವಪ್ಪ ನುಡಿದ ಕಾರ್ಣಿಕಕ್ಕೂ ರಾಜ್ಯ ರಾಜಕೀಯಕ್ಕೂ ಸಂಬಂಧ ಇದೆ ಎಂದು ವಿಶ್ಲೇಷಿಸಲಾಗಿದೆ. ರಾಜ್ಯದ ಯಾವುದೇ ರಾಜಕಾರಣಿಗೂ ತೊಂದರೆ ಇಲ್ಲ ಎಂಬುದು ಇದರ ಒಳಾರ್ಥ ಎನ್ನಲಾಗುತ್ತಿದೆ.
Last Updated : Feb 11, 2020, 7:42 PM IST