ಕರ್ನಾಟಕ

karnataka

ETV Bharat / videos

ಜಾರಕಿಹೊಳಿ ಸಿಡಿ ಕೇಸ್‌.. ಯುವತಿ ನೆರವು ಕೇಳಿದ್ರೇ ಸುಪ್ರೀಂಕೋರ್ಟ್‌ವರೆಗೂ ಹೋರಾಡುವೆ - ಮುಲಾಲಿ - ಸಿಡಿ ಪ್ರಕಣವನ್ನು ಸಿಬಿಐ ತನಿಖೆ ನಡೆಸಬೇಕು

By

Published : Mar 24, 2021, 5:07 PM IST

ಮಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರ ಸಿಡಿ ಪ್ರಕರಣದಲ್ಲಿ ನನ್ನ ಪಾತ್ರ ಇಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಯಾಗಲಿ ಎಂದು ಭ್ರಷ್ಟಾಚಾರ ವಿರೋಧಿ ಹೋರಾಟಗಾರ ರಾಜಶೇಖರ ಮುಲಾಲಿ ಹೇಳಿದರು. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತ‌ನಾಡಿದ ಅವರು, ಈ ಹಿಂದೆಯೂ ಎಸ್ಐಟಿಗೆ ನೀಡಿದ ಪ್ರಕರಣಗಳು ಹಳ್ಳ ಹಿಡಿದಿವೆ. ಈ ಕಾರಣದಿಂದ ಸಿಬಿಐ ತನಿಖೆಯಾಗಬೇಕು. ಸಿಡಿ ಪ್ರಕರಣದಲ್ಲಿ ಯುವತಿ ರಕ್ಷಣೆ ಕೋರಿದರೆ ಸುಪ್ರೀಂಕೋರ್ಟ್ ತನಕವೂ ಹೋರಾಟ ನಡೆಸಲು ಸಿದ್ಧನಿದ್ದೇನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭಾ ಅಧಿವೇಶನದಲ್ಲಿ ನಡೆದಿರುವ ಚರ್ಚೆಯಲ್ಲಿ ನನ್ನ ಹೆಸರನ್ನು ಪ್ರಸ್ತಾಪಿಸಲಾಗಿದೆ. ಇದನ್ನು ಕಡತದಿಂದ ತೆಗೆದು ಹಾಕುವಂತೆ ಸಭಾಧ್ಯಕ್ಷರಿಗೆ ಮನವಿ ಮಾಡಿದರು.

ABOUT THE AUTHOR

...view details