ನನ್ನ ಕ್ಷೇತ್ರದ ಹಣ ಬಿಡುಗಡೆಗೆ ತಡೆ: ಶಾಸಕ ದೇವಾನಂದ ಚವ್ಹಾಣ ಆರೋಪ - ಶಾಸಕ ದೇವಾನಂದ ಚೌವ್ಹಾಣ
ನನ್ನ ಕ್ಷೇತ್ರಕ್ಕೆ ಸಂಬಂಧಿಸಿದಂತೆ 55 ಕೋಟಿ ರೂಪಾಯಿ ಅನುದಾನ ತಡೆ ಹಿಡಿಯಲಾಗಿದೆ. ಇದಕ್ಕೆ ಸರ್ಕಾರ ಕಾರಣ ಸಹ ನೀಡಿಲ್ಲ ಎಂದು ವಿಜಯಪುರ ಜಿಲ್ಲೆಯ ನಾಗಠಾಣ ಕ್ಷೇತ್ರದ ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅನುದಾನ ತಡೆ ಹಿಡಿದಿರುವುದರ ಬಗ್ಗೆ ಸರ್ಕಾರಿ ಆದೇಶವಾಗಿರೋದು ಗೊತ್ತಾಗಿದೆ. ಆದರೆ, ಇದರ ಹಿಂದೆ ಯಾರ ಕೈವಾಡವಿದೆ ಎನ್ನುವುದು ಗೊತ್ತಾಗಿಲ್ಲ ಎಂದಿದ್ದಾರೆ.