ಇಲ್ಲಿಗೇಕೆ ಬಂದಿದ್ದೀರಿ? ಸಂಸದ ಜಾಧವ್ಗೆ ಮುಟಗಾ ಗ್ರಾಮಸ್ಥರ ಘೇರಾವ್ - kalburgi people outrage against Umesh Jadhav
ಕಲಬುರಗಿ: ಜಿಲ್ಲೆಯಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಪ್ರವಾಹಕ್ಕೆ ಸಿಲುಕಿ ಜನರು ಕಂಗಾಲಾಗಿದ್ದಾರೆ. ಆದ್ರೆ ನಾಲ್ಕು ದಿನಗಳ ನಂತರ ಸಂಸದ ಉಮೇಶ್ ಜಾಧವ್ ಗ್ರಾಮಗಳ ಭೇಟಿಗೆ ಆಗಮಿಸಿರುವದು ಗ್ರಾಮಸ್ಥರನ್ನು ಕೆರಳುವಂತೆ ಮಾಡಿದೆ. ಚಿತ್ತಾಪೂರ ತಾಲೂಕಿನ ಮುಟಗಾ ಗ್ರಾಮಕ್ಕೆ ತೆರಳಿದ ಸಂಸದ ಉಮೇಶ್ ಜಾಧವ್ ಕಾರ್ಗೆ ಘೇರಾವ್ ಹಾಕಿ ಮರಳಿ ಹೋಗುವಂತೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಳೆಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದೇವೆ. ಮಳೆ ಬಂದು ಮೂರು-ನಾಲ್ಕು ದಿನಗಳು ಕಳೆದ ಮೇಲೆ ಇಲ್ಲಿಗೇಕೆ ಬಂದಿದ್ದೀರಿ? ಎಂದು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು ಜಾಧವ್ ವಿರುದ್ಧ ಘೋಷಣೆ ಕೂಗಿ ವಾಪಸ್ ಕಳುಹಿಸಿದ್ದಾರೆ.