ಕರ್ನಾಟಕ

karnataka

ETV Bharat / videos

ಪೌರತ್ವ ಕಾಯ್ದೆಯ ಸತ್ಯಾಸತ್ಯೆಯನ್ನು ಅರಿಯಬೇಕು: ವಿಶ್ವ ಹಿಂದೂ ಪರಿಷತ್ ಮುಖಂಡ ಗೋಪಾಲ್ - ಪೌರತ್ವ ಮುಸ್ಲಿಂರ ವಿರೋಧಿಯಲ್ಲ

By

Published : Jan 29, 2020, 11:39 PM IST

ಕಲಬುರಗಿ: ವಿಶ್ವ ಹಿಂದೂ ಪರಿಷತ್ ವತಿಯಿಂದ ಕಲಬುರ್ಗಿಯ ರೋಟರಿ ಕ್ಲಬ್ ಶಾಲೆ ಆವರಣದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪರ ಸಮಾವೇಶ ಆಯೋಜಿಸಲಾಗಿತ್ತು. ಪೌರತ್ವ ತಿದ್ದುಪಡಿ ಕಾಯ್ದೆ ಸತ್ಯಾಸತ್ಯತೆ ಕುರಿತು ಮಾತನಾಡಿದ ವಿಶ್ವ ಹಿಂದೂ ಪರಿಷತ್ ಮುಖಂಡ ಗೋಪಾಲ್, ಪ್ರತಿಪಕ್ಷಗಳ ವಿರುದ್ಧ ಕಿಡಿಕಾರಿದರು. ಪೌರತ್ವ ಮುಸ್ಲಿಂಮರ ವಿರೋಧಿಯಲ್ಲ. ಯಾರ ಪೌರತ್ವವನ್ನು ಕಸಿದುಕೊಳ್ಳಲು ರೂಪಿಸಿರುವ ಕಾಯ್ದೆಯಲ್ಲ. ಈ ದೇಶದಲ್ಲಿ ಹುಟ್ಟಿದ ಎಲ್ಲರಿಗೂ ಪೌರತ್ವ ಸಿಕ್ಕೆ ಸಿಗುತ್ತದೆ. ಆದರೆ ಇದರ ವಿರುದ್ಧ ಅಪ ಪ್ರಚಾರ ಮಾಡಲಾಗುತ್ತಿದೆ. ಕಾಯ್ದೆ ವಿರುದ್ಧ ಎತ್ತಿಕಟ್ಟಿ ಪ್ರತಿಭಟನೆ ಮಾಡಿಸಲಾಗುತ್ತಿದೆ ಎಂದರು. ಎಲ್ಲರೂ ಪೌರತ್ವ ಕಾಯ್ದೆ ಸತ್ಯಾಸತ್ಯೆಯನ್ನು ಅರಿಯಬೇಕೆಂದು ಕರೆ ನೀಡಿದರು.

ABOUT THE AUTHOR

...view details