ಕರ್ನಾಟಕ

karnataka

ETV Bharat / videos

ಕೋವಿಡ್​ ನಡುವೆ ಸುರಕ್ಷತಾ ಕ್ರಮಗಳೊಂದಿಗೆ ನಮಾಜ್ ಮಾಡಿದ ಮುಸ್ಲಿಂ ಬಾಂಧವರು - Tumkur bakfreed

By

Published : Aug 1, 2020, 4:13 PM IST

ತುಮಕೂರು : ಕೊರೊನಾ ಭೀತಿ ನಡುವೆಯೂ ಬಕ್ರೀದ್ ಹಬ್ಬವನ್ನು ಮುಸ್ಲಿಂ ಸಮುದಾಯದವರು ಜಿಲ್ಲಾದ್ಯಂತ ಶ್ರದ್ಧಾ, ಭಕ್ತಿ, ಸುರಕ್ಷತಾ ಕ್ರಮಗಳೊಂದಿಗೆ ಆಚರಣೆ ಮಾಡಿದರು. ಸರ್ಕಾರ ಸೂಚಿಸಿದಂತೆ ಮಸೀದಿಗಳಲ್ಲಿ ಸಾಮಾಜಿಕ ಅಂತರದೊಂದಿಗೆ ಮಾಸ್ಕ್​ ಧರಿಸಿಕೊಂಡು ನಮಾಜ್​ನಲ್ಲಿ ಪಾಲ್ಗೊಂಡಿದ್ದರು. 40 ರಿಂದ 50 ಮಂದಿ ಪ್ರತಿ ತಂಡದೊಂದಿಗೆ ಮಸೀದಿಗಳಲ್ಲಿ ಪ್ರಾರ್ಥನೆ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿತ್ತು. ಪ್ರತಿ ವರ್ಷದಂತೆ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಲು ಅವಕಾಶ ದೊರೆಯದ ಹಿನ್ನೆಲೆ ಕೆಲ ಮುಸ್ಲಿಂ ಸಮುದಾಯದವರು ತೀವ್ರ ಬೇಸರ ವ್ಯಕ್ತಪಡಿಸಿದರು.

ABOUT THE AUTHOR

...view details