ಮೈಶುಗರ್ ವಿಚಾರದಲ್ಲಿ ನನ್ನ ಹೆಸರು ತಳುಕು ಹಾಕುವುದು ಬೇಡ; ಮುರುಗೇಶ್ ನಿರಾಣಿ - ಮೈಶುಗರ್ ಕಂಪನಿ
ಮೈಶುಗರ್ ಕಂಪನಿ ವಿಚಾರವಾಗಿ ಬಿಜೆಪಿ ಶಾಸಕ ,ನಿರಾಣಿ ಶುಗರ್ಸ್ ಮಾಲೀಕ ಮುರುಗೇಶ್ ನಿರಾಣಿ ಅವರು ವಿಡಿಯೋ ಸಂದೇಶದ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಮೈಶುಗರ್ ವಿಚಾರವಾಗಿ ಸರ್ಕಾರ ನನ್ನ ಹೆಸರು ತಳುಕು ಹಾಕುವುದು ಬೇಡ. ಸರ್ಕಾರ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ ಹಾಗಾಗಿ ನಾನು ಹೇಗೆ ಟೆಂಡರ್ ಹಾಕಲಿ ಎಂದು ಪ್ರಶ್ನೆ ಮಾಡಿದ್ದಾರೆ. ಪಾರದರ್ಶಕ ನಿಯಮಗಳಡಿ ಸರ್ಕಾರ ಟೆಂಡರ್ ಕರೆಯಬೇಕು. ತಾಂತ್ರಿಕ ಮತ್ತು ಆರ್ಥಿಕ ಅರ್ಹತೆ ನೋಡಿ ಗುತ್ತಿಗೆ ನೀಡಲಾಗುತ್ತದೆ. ಈ ನಿಯಮ ಗೊತ್ತಿಲ್ಲದೆ ವಿನಾಕಾರಣ ನನ್ನ ಮೇಲೆ ಗೂಬೆ ಕೂರಿಸಲಾಗುತ್ತಿದೆ ಎಂದು ಅಸಮಧಾನ ಹೊರ ಹಾಕಿದ್ದಾರೆ.