ಸಿಬಿಐ ದುರುಪಯೋಗ ಕಾಂಗ್ರೆಸ್‌ನಿಂದಾಗಿದೆ ಹೊರತು ಬಿಜೆಪಿಯಿಂದಲ್ಲ.. ಸಂಸದ ಮುನಿಸ್ವಾಮಿ - muniswami react about CBI attack
ರಾಜಕೀಯಕ್ಕಾಗಿ ಕಾಂಗ್ರೆಸ್ ಸಿಬಿಐ ಬಳಕೆ ಮಾಡಿಕೊಂಡ ಹಾಗೆ ಬಿಜೆಪಿ ಮಾಡಿಲ್ಲ ಎಂದು ಸಂಸದ ಎಸ್ ಮುನಿಸ್ವಾಮಿ ಹೇಳಿದ್ದಾರೆ. ಇಂದು ಕೋಲಾರದಲ್ಲಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ರಾಜಕೀಯಕ್ಕಾಗಿ ಸಿಬಿಐ ಹಾಗೂ ಐಟಿಯನ್ನ ದುರುಪಯೋಗಪಡಿಸಿಕೊಂಡಿರುವುದು ಕಾಂಗ್ರೆಸ್ ಹೊರತು ಬಿಜೆಪಿ ಅಲ್ಲ ಎಂದರು. ಡಿಕೆಶಿ ಅವರು ಯಾವುದೇ ತಪ್ಪು ಮಾಡಿಲ್ಲ ಎನ್ನುವುದಾದ್ರೆ ಪ್ರಕರಣದಿಂದ ಹೊರಗೆ ಬರ್ತಾರೆ, ಅದನ್ನ ಬಿಟ್ಟು ಬಿಜೆಪಿ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ತಿರುಗೇಟು ನೀಡಿದರು.