ಮಂಡ್ಯದಲ್ಲಿ ಸಾರ್ವಜನಿಕರಿಗೆ ಕೋಟ್ಯಂತರ ರೂ. ದೋಖಾ! - ಮಂಡ್ಯದಲ್ಲಿ ಸಾರ್ವಜನಿಕರಿಗೆ ಕೋಟಿ ಹಣ ದೋಖಾ ಪ್ರಕರಣ
ಸಕ್ಕರೆ ನಗರಿ ನಾಗರಿಕರೆ ನಿಮ್ಮ ಕಂದಾಯದ ರಶೀದಿಯನ್ನು ಒಮ್ಮೆ ಪರಿಶೀಲನೆ ಮಾಡಿ. ಬ್ಯಾಂಕ್ಗೆ ಹಣ ಡಿಪಾಸಿಟ್ ಮಾಡಿದ್ದರೆ ಒಮ್ಮೆ ಪರೀಕ್ಷಿಸಿಕೊಳ್ಳಿ. ಯಾಕಂದ್ರೆ ನಗರಸಭೆ ನೌಕರನೋರ್ವ ಕಂದಾಯದ ಹಣವನ್ನು ಲಪಾಟಾಯಿಸಿದ್ದಾನೆ ಎಂದು ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಕುರಿತ ದಾಖಲೆಗಳನ್ನ ಸಾಮಾಜಿಕ ಕಾರ್ಯಕರ್ತರು ಬಿಡುಗಡೆ ಮಾಡಿದ್ದಾರೆ.