ಬಿಡಾಡಿ ದನಗಳನ್ನು ಹಿಡಿದು ಗೋ ಶಾಲೆ ಬಿಟ್ಟ ನಗರಸಭೆ ಸಿಬ್ಬಂದಿ... ಮಾಲೀಕರಿಗೆ ಖಡಕ್ ವಾರ್ನ್ ನೀಡಿದ ನಗರಸಭೆ - ಬಿಡಾಡಿ ದನಗಳು
ಹಾಸನ ನಗರದಲ್ಲಿ ಬಿಡಾಡಿ ದನಗಳು ಎಲ್ಲಿ ಬೇಕೆಂದರಲ್ಲಿ ಓಡಾಡುತ್ತಿದ್ದು, ಇದರಿಂದ ಸಾರ್ವಜನಿಕರು ತೊಂದರೆಯಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಆ. 12ರಂದು ಮಾಧ್ಯಮದಲ್ಲಿ ವರದಿ ಪ್ರಕಟವಾಗಿತ್ತು. ಇದಕ್ಕೆ ಸ್ಪಂದಿಸಿದ ನಗರಸಭೆ ಆಯುಕ್ತರು ಸಿಬ್ಬಂದಿಯನ್ನು ಕಳುಹಿಸಿ ಎಲ್ಲೆಂದರಲ್ಲಿ ಓಡಾಡುತ್ತಿದ್ದ ದನಗಳನ್ನು ಹಿಡಿದಿದ್ದರು.ಇದಕ್ಕೆ ದನಗಳ ಮಾಲೀಕರು ವಿರೋಧ ವ್ಯಕ್ತಪಡಿಸಿ ಸಿಬ್ಬಂದಿ ಜೊತೆ ವಾಗ್ವಾದ ನಡೆಸಿದರು. ತಮ್ಮ ದನಗಳನ್ನು ಬಿಟ್ಟು ಬಿಡುವಂತೆ ಮನವಿ ಮಾಡಿದರೂ ಸಿಬ್ಬಂದಿ ಬಿಡಲಿಲ್ಲ. ಸೆರೆ ಹಿಡಿದ ದನಗಳನ್ನು ಬಾಣಾವರದ ಗೋ ಶಾಲೆಗೆ ಬಿಡಲಾಗಿದ್ದು, ಅವುಗಳಿಗೆ ಮೇವು, ನೀರಿನ ವ್ಯವಸ್ಥೆಗಾಗಿ ನಗರಸಭೆ ಹಣ ನೀಡಲಿದೆ. ಈಗಲೂ ಮಾಲೀಕರು ಎಚ್ಚೆತ್ತುಕೊಳ್ಳದಿದ್ದರೆ ದಂಡ ಹಾಕುವುದರ ಜತೆಗೆ ದನಗಳನ್ನು ವಶಕ್ಕೆ ಪಡೆಯಲಾಗುವುದು ಎಂದು ನಗರಸಭೆ ಆಯುಕ್ತ ಪರಮೇಶ್ ಎಚ್ಚರಿಕೆ ನೀಡಿದ್ದಾರೆ.