ಅದ್ಧೂರಿಯಾಗಿ ನೆರವೇರಿದ ಅಯ್ಯನಗುಡಿ ರಥೋತ್ಸವ: ಸಾವಿರಾರು ಭಕ್ತರು ಭಾಗಿ - ಮಾಜಿ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ
ಮುದ್ದೇಬಿಹಾಳ: ಕೊರೊನಾ ಎರಡನೇ ಅಲೆ ಭೀತಿಯ ಮಧ್ಯೆಯೂ ತಾಲೂಕಿನಲ್ಲಿ ಜಾತ್ರೆ, ಉತ್ಸವ, ಸಭೆ, ಸಮಾರಂಭಗಳು ಮುಂದುವರೆದಿವೆ. ತಾಲೂಕಿನ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಅಯ್ಯನಗುಡಿ ಗಂಗಾಧರೇಶ್ವರ ರಥೋತ್ಸವ ಸೋಮವಾರ ಸಂಜೆ ಸಾವಿರಾರು ಭಕ್ತಾದಿಗಳ ಮಧ್ಯೆ ಅದ್ಧೂರಿಯಾಗಿ ಜರುಗಿತು. ಬಲದಿನ್ನಿಯ ನಾಡಗೌಡ ಮನೆತನದ ಹಿರಿಯರು, ಮಾಜಿ ಶಾಸಕ ಸಿ.ಎಸ್. ನಾಡಗೌಡ ಅಪ್ಪಾಜಿ ಅವರ ಸಹೋದರರು ರಥಕ್ಕೆ ಪೂಜೆ ಸಲ್ಲಿಸಿದರು. ಬಳಿಕ ನೂರಾರು ಜನರು ರಥ ಎಳೆದರು.