ಮುದ್ದೇಬಿಹಾಳದಲ್ಲಿ ಅದ್ಧೂರಿ ಬನಶಂಕರಿ ದೇವಿ ರಥೋತ್ಸವ - Muddebiha's Banashankari Devi Fair
ಮುದ್ದೇಬಿಹಾಳ: ಪಟ್ಟಣದ ಬನಶಂಕರಿ ದೇವಿ ಜಾತ್ರೆ ಕೋವಿಡ್ ಭೀತಿಯನ್ನು ಜನರಿಂದ ದೂರವಾಗಿಸಿದೆ ಎಂಬುದನ್ನು ತೋರಿಸಿದೆ. ಇಂದು ಬನಶಂಕರಿ ದೇವಿ ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಸಾವಿರಾರು ಜನರು ಕೊರೊನಾ ಆತಂಕವಿಲ್ಲದೆ ಉತ್ಸಾಹದಿಂದ ತೇರು ಎಳೆಯುವುದನ್ನು ಕಣ್ತುಂಬಿಕೊಂಡರು. ಶಿರೋಳ ಗ್ರಾಮದ ದೈವದವರು ತೇರಿನ ಮಿಣಿ ತಂದ ಬಳಿಕ ಕಳಸ, ಪಲ್ಲಕ್ಕಿ ಮೆರವಣಿಗೆ ನಡೆಸಿ ರಥೋತ್ಸವ ನಡೆಸಲಾಯಿತು. ಈ ವೇಳೆ ತೇರಿಗೆ ಉತ್ತತ್ತಿ, ಬಾಳೆಹಣ್ಣು, ಲಾಡು ಎಸೆದು ಭಕ್ತರು ಸಂಭ್ರಮಿಸಿದರು.