ಎಂಟಿಬಿ, ವಿಶ್ವನಾಥ್, ಶಂಕರ್ ಪಕ್ಷ ಬಿಟ್ರೂ ಅವರ ಆಸೆ ಈಡೇರಿಲ್ಲ: ಹೆಚ್.ಎಂ.ರೇವಣ್ಣ ವ್ಯಂಗ್ಯ - Former Minister H .M Revanna
ಬೆಂಗಳೂರು: ಕರಗ ಬಂತು ಕರಗ ಅಂತ ಕಾಯುವ ಪರಿಸ್ಥಿತಿ ಸಚಿವ ಆಕಾಂಕ್ಷಿಗಳಿಗೆ ಆಗಿದೆ. ಪಕ್ಷ ಬಿಟ್ಟು ಹೋದರೂ ಎಂಟಿಬಿ ನಾಗರಾಜ್, ಹೆಚ್.ವಿಶ್ವನಾಥ್ ಮತ್ತು ಆರ್.ಶಂಕರ್ ಆಸೆ ಈಡೇರಲಿಲ್ಲ ಎಂದು ಮಾಜಿ ಸಚಿವ ಹೆಚ್.ಎಂ.ರೇವಣ್ಣ ವ್ಯಂಗ್ಯವಾಡಿದ್ದಾರೆ. ಕುರುಬರ ಸಂಘದಲ್ಲಿ ನಡೆದ ಹಾಲುಮತ ಸಂಸ್ಕೃತಿ ವೈಭವ 2021 ಸುದ್ದಿಗೋಷ್ಠಿಯ ನಂತರ ಮಾತನಾಡಿದ ಅವರು, ಅವರು ಬಿಜೆಪಿ ಸೇರಿ ವರ್ಷ ಕಳೆದಿದೆ. ಅವರು ಪಕ್ಷ ಬಿಟ್ಟು ಹೋಗಿದ್ದು ಮೊದಲನೇಯ ತಪ್ಪು. ಜಾತಿ ಬಿಟ್ಟರೂ ಸುಖ ಇರಬೇಕು ಎಂದು ನಮ್ಮ ಹಳ್ಳಿ ಕಡೆ ಇರುವ ಗಾದೆ ನೆನಪಾಗುತ್ತೆ ಎಂದು ವ್ಯಂಗ್ಯವಾಡಿದ್ದಾರೆ.