ಶರತ್ ಬಚ್ಚೇಗೌಡ ವಿರುದ್ದ ಎಂಟಿಬಿ ನಾಗರಾಜ್ ವಾಗ್ದಾಳಿ - ಎಂಟಿಬಿ ನಾಗರಾಜ್ ವಾಗ್ದಾಳಿ
ಅನರ್ಹ ಶಾಸಕ ಎಂಬಿಟಿ ನಾಗರಾಜ್ ಇಂದು ತಮ್ಮ ಗೃಹ ಕಚೇರಿಯಲ್ಲಿ ಸಂಸದ ಬಚ್ಚೇಗೌಡ ಹಾಗು ಶರತ್ ಬಚ್ಚೇಗೌಡ ಗೌಡ ವಿರುದ್ದ ಹರಿಹಾಯ್ದಿದ್ದಾರೆ. ನಾನು ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಬಚ್ಚೇಗೌಡ ಹಾಗು ಶರತ್ ಬಚ್ಚೇಗೌಡ ಬಗ್ಗೆ ಮಾತನಾಡಿಲ್ಲ, ಅವರ ಬಳಿ ಕಣ್ಣೀರು ಹಾಕಿಲ್ಲ. ಅಂತಹ ಪರಿಸ್ಥಿತಿ ನನಗೆ ಬಂದಿಲ್ಲ ಮತ್ತು ಬರುವುದೂ ಇಲ್ಲ ಎಂದಿದ್ದಾರೆ.