ನನ್ನ ಸೋಲಿಗೆ ತಂದೆ-ಮಗ ಇಬ್ಬರೂ ಕಾರಣ.. ಎಂಟಿಬಿ ಗುಡುಗು - ಉಪಚುನಾವಣೆ ಕುರಿತು ಎಂಟಿಬಿ ನಾಗರಾಜ ಹೇಳಿಕೆ ಸುದ್ದಿ
ಹೊಸಕೋಟೆ:ನನ್ನ ಸೋಲಿಗೆ ಸಂಸದ ಬಚ್ಚೇಗೌಡ ಮತ್ತು ಶರತ್ ಬಚ್ಚೇಗೌಡ ಕಾರಣ. ಸಿಎಂ ಯಡಿಯೂರಪ್ಪನವರು 3 ಬಾರಿ ಪ್ರಚಾರಕ್ಕೆ ಬಂದರೂ ಬಂದಿರಲಿಲ್ಲ. ಸಂಸದ ಬಚ್ಚೇಗೌಡರು ಪಕ್ಷದ್ರೋಹದ ಕೆಲಸ ಮಾಡಿದ್ದಾರೆ ಎಂದು ಪರಾಜಿತ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ತಮ್ಮ ಸೋಲಿಗೆ ಕಾರಣ ನೀಡಿದ್ದಾರೆ. ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಂಟಿಬಿ, ಸಿಎಂ ಯಡಿಯೂರಪ್ಪ ಭೇಟಿ ಮಾಡಿ ನನಗೆ ಮತ್ತು ನಮ್ಮ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. ಈ ಹಿಂದೆ ಬಿಎಸ್ವೈ ಮತ್ತು ರಾಜ್ಯ ಹಿರಿಯ ನಾಯಕರ ಜೊತೆ ಚರ್ಚೆ ನಡೆಸಿ ಹೇಳಿದ್ದರೂ ಕೂಡಾ ಶರತ್ ಬಚ್ಚೇಗೌಡ ರೆಬೆಲ್ ಆಗಿ ಚುನಾವಣೆ ಸ್ಪರ್ಧೆ ಮಾಡಿದ್ದರು. ಶರತ್ ಜೊತೆ ಕೆಲ ಬಿಜೆಪಿಗರು ಸೇರಿ ದ್ರೋಹ ಬಗೆದಿದ್ದಾರೆ ಎಂದು ಆರೋಪಿಸಿದರು.