ಕರ್ನಾಟಕ

karnataka

ETV Bharat / videos

ಸಂಪುಟ ರಚನೆ: ನೂತನ ಸಚಿವರಿಗೆ ಶುಭಾಶಯ ಕೋರಿದ ಎಂಟಿಬಿ - ಸಿಎಂ ಯಡಿಯೂರಪ್ಪ ಭರವಸೆ

By

Published : Feb 6, 2020, 11:07 AM IST

ಬೆಂಗಳೂರು: ಸಂಪುಟ ರಚನೆಯ ಕುರಿತಾಗಿ ಅನರ್ಹ ಶಾಸಕ ಎಂಟಿಬಿ ನಾಗರಾಜ್​​ ಪ್ರತಿಕ್ರಿಯಿಸಿದ್ದು, ನೂತನ ಸಚಿವರಿಗೆ ಶುಭಾಶಯ ತಿಳಿಸಿದ್ದಾರೆ. ಸಚಿವರಾಗುತ್ತಿರುವ ನಮ್ಮ ಸ್ನೇಹಿತರು ಬಹಳ ದಿನಗಳಿಂದ ತುಂಬಾ ನೊಂದಿದ್ದರು. ಸಾಕಷ್ಟು ಕಷ್ಟ ಪಟ್ಟಿದ್ದಾರೆ. ಇಂದು ಅವರು ಸಚಿವ ಸಂಪುಟದಲ್ಲಿ ಸೇರ್ಪಡೆಯಾಗುತ್ತಿರುವುದು ಖುಷಿ ತಂದಿದೆ. ನಮಗೆ ಸಿಎಂ ಯಡಿಯೂರಪ್ಪ ಭರವಸೆ ಕೊಟ್ಟಿದ್ದಾರೆ. ಆದಷ್ಟು ಬೇಗ ಒಳ್ಳೆಯ ಸ್ಥಾನಮಾನ ಕೊಡುತ್ತಾರೆ ಎನ್ನುವ ನಂಬಿಕೆ ನನಗೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ABOUT THE AUTHOR

...view details