ಹೊಸಕೋಟೆಯಲ್ಲಿ ಎಂಟಿಬಿ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಿದ್ಧ - various works in hoskote constituency'
ಮೈತ್ರಿಯಿಂದ ಹೊರಬಂದು ಅನರ್ಹರಾಗಿರಯುವ ಎಂಟಿಬಿ ಕ್ಷೇತ್ರ ಹೊಸಕೋಟೆಗೆ ಇಂದು ಸಿಎಂ ಬಿ.ಎಸ್.ಯಡಿಯೂರಪ್ಪ ಆಗಮಿಸಿ, 150 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡುವ ಕಾರ್ಯಕ್ರಮ ನಿಗದಿಯಾಗಿದೆ. ಕಾರ್ಯಕ್ರಮದಲ್ಲಿ ಮಾತ್ರ ಖಾಲಿ ಕುರ್ಚಿಗಳ ದರ್ಶನವೇ ಎದ್ದು ಕಾಣಿಸುತ್ತಿದೆ. ಅನರ್ಹ ಶಾಸಕ ಎಂಟಿಬಿ ನಾಗರಾಜ್ ಹಾಗೂ ಮುಖ್ಯಮಂತ್ರಿ ಬಿಎಎಸ್ವೈ ಒಂದೇ ವೇದಿಕೆ ಹಂಚಿಕೊಳ್ಳಲಿದ್ದಾರೆ. ಈ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಿಲಾಗಿದ್ದು, ನೀರಾವರಿ ಯೋಜನೆಗೆ ಬಿಎಸ್ವೈ ಚಾಲನೆ ನೀಡಲಿದ್ದಾರೆ. ಮುಖ್ಯಮಂತ್ರಿಗಳ ಸ್ವಾಗತಕ್ಕೆ ಭರ್ಜರಿ ಸೇಬಿನ ಹಾರ ತಯಾರಾಗಿ ಕ್ರೇನ್ ಮೂಲಕ ಹಾರ ಹಾಕಲು ಸಿದ್ಧತೆ ನಡೆದಿದೆ.