ಕರ್ನಾಟಕ

karnataka

ETV Bharat / videos

'ಕೃಷ್ಣ ಕಲೆ'ಯಲ್ಲಿ ಅರಳಿದ ಮೋದಿ ಮುಖ, ಪ್ರಧಾನಿ ಹುಟ್ಟುಹಬ್ಬದಂದು ಗಮನ ಸೆಳೆದ ಕಲಾವಿದ - ಪ್ರಧಾನಿ ಮೋದಿಗೆ ಮೈಸೂರು ಕಲಾವಿದನಿಂದ ವಿಶೇಷ ಗಿಫ್ಟ್

By

Published : Sep 17, 2020, 3:48 PM IST

Updated : Sep 17, 2020, 5:52 PM IST

ಮೈಸೂರು: ಪ್ರಧಾನಿ ನರೇಂದ್ರ ಮೋದಿಯವರ 70 ನೇ ಜನ್ಮ ದಿನದ ಪ್ರಯುಕ್ತ ನಗರದ ಕಲಾವಿದ ನಂಜುಂಡಸ್ವಾಮಿ ಪೆನ್ಸಿಲ್ ಲೆಡ್​ನಲ್ಲಿ ಮೋದಿಯವರ ಮುಖವನ್ನು ಕೆತ್ತುವ ಮೂಲಕ ಗಮನ ಸೆಳೆದಿದ್ದಾರೆ. ಈ‌ ಬಗ್ಗೆ ಈಟಿವಿ ಭಾರತ್ ಜೊತೆ ಮಾತನಾಡಿದ ಕಲಾವಿದ, ಇದು ಮೈಕ್ರೋ ಕಲೆ ಕನ್ನಡದಲ್ಲಿ ಕೃಷ್ಣ ಕಲೆ ಎನ್ನಬಹುದಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಪ್ರಯುಕ್ತ ಅವರ ಮುಖವನ್ನು ಚಿಕ್ಕ ಪೆನ್ಸಿಲ್​ನಲ್ಲಿ ಸೂಜಿ ಮತ್ತು ಸರ್ಜಿಕಲ್ ಚಾಕು ಬಳಸಿ ಕೆತ್ತನೆ ಮಾಡಿದ್ದೇನೆ. ಮುಖದ ಕೆಳಗೆ ಶ್ರೀ ನರೇಂದ್ರ ಮೋದಿ ಎಂದು ಕೆತ್ತನೆ ಮಾಡಿದ್ದೇನೆ. ಅವರ ಹುಟ್ಟು ಹಬ್ಬಕ್ಕೆ ನನ್ನದು ಸಣ್ಣ ಕೊಡುಗೆ ಎಂದಿದ್ದಾರೆ. ಮೈಸೂರು ರಾಜವಂಶಸ್ಥರು, ಚಿತ್ರ ನಟರು, ರಾಜಕಾರಣಿಗಳು ಮತ್ತು ಸ್ವಾಮೀಜಿಗಳ ಚಿತ್ರಗಳನ್ನು ಈ ಹಿಂದೆ ನಂಜುಂಡಸ್ವಾಮಿ ಮೈಕ್ರೋ ಆರ್ಟ್ಸ್ ಮೂಲಕ ಕೆತ್ತಿದ್ದಾರೆ.
Last Updated : Sep 17, 2020, 5:52 PM IST

ABOUT THE AUTHOR

...view details