ವಿಶ್ವನಾಥ್ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಆಗುತ್ತಾರೆ: ಸಂಸದ ವಿ.ಶ್ರೀನಿವಾಸ್ ಪ್ರಸಾದ್ - H Vishwanath
ಹೆಚ್. ವಿಶ್ವನಾಥ್ಗೆ ಮಂತ್ರಿ ಸ್ಥಾನ ಕೊಡುತ್ತಾರೆ, ಅವರು ಜಿಲ್ಲಾ ಉಸ್ತುವಾರಿ ಸಚಿವರು ಆಗುತ್ತಾರೆ. ಅವರಿಗೆ ನಾನು ಒಳ್ಳೆಯ ಆಡಳಿತ ಕೊಡಲು ಸಲಹೆ ನೀಡುತ್ತೇನೆ ಎಂದು ಸಂಸದ ಹಾಗೂ ಬಿಜೆಪಿ ರಾಜ್ಯ ಹಿರಿಯ ಉಪಾಧ್ಯಕ್ಷರು ಆದ ವಿ.ಶ್ರೀನಿವಾಸ್ ಪ್ರಸಾದ್ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ. 25 ದಿನಗಳ ನಂತರ ಮಂತ್ರಿ ಮಂಡಲ ರಚನೆಯಾಗಿದೆ. ಬಿಜೆಪಿ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಮತ್ತು ಜೆಡಿಎಸ್ನ ಅನರ್ಹ ಶಾಸಕರ ಕಾರಣ ಇದರಿಂದ ಅವರನ್ನು ಮಂತ್ರಿ ಮಾಡಬೇಕು, ಸಿಎಂ ಇಂತಹ ಇಕ್ಕಟ್ಟಿನಲ್ಲಿ ಚಾಣಾಕ್ಷತನದಿಂದ ಕೆಲಸ ಮಾಡಬೇಕು ಎಂದು ಸಿಎಂಗೆ ಸಲಹೆ ನೀಡಿದ್ದಾರೆ.