ಮಂಡ್ಯ: ರೈಲ್ವೆ ನಿಲ್ದಾಣಕ್ಕೆ ಸಂಸದೆ ಸುಮಲತಾ ಭೇಟಿ, ಕಾಮಗಾರಿ ಕುರಿತು ಪರಿಶೀಲನೆ... - ಮಂಡ್ಯ ರೈಲ್ವೆ ನಿಲ್ದಾಣ
ಸಂಸದೆ ಸುಮಲತಾ ಅಂಬರೀಶ್ ನಗರದ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಅಗತ್ಯವಾಗಿ ಬೇಕಾಗಿರುವ ಎಸ್ಕಲೇಟರ್ ಹಾಗೂ ಲಿಪ್ಟ್ ನಿರ್ಮಾಣಕ್ಕೆ ಜಾಗದ ಪರಿಶೀಲನೆ ನಡೆಸಿದ್ದು, ನಂತರ ಪೇಟೆ ಬೀದಿಗೆ ಸಂಪರ್ಕ ಕಲ್ಪಿಸುವ ರೈಲ್ವೆ ಗೇಟ್ ತೆರವು ಮಾಡಿ, ಅಂಡರ್ ಪಾಸ್ ನಿರ್ಮಾಣಕ್ಕೆ ಬೇಕಾದ ಹಣಕಾಸು ಹಾಗೂ ಕ್ರಿಯಾ ಯೋಜನೆ ಕುರಿತು ರೈಲ್ವೆ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದರು.