ರಾಮ ಮಂದಿರ ನಿರ್ಮಾಣ ನಮ್ಮ ಕನಸು.. ಸಂಸದೆ ಶೋಭಾ ಕರಂದ್ಲಾಜೆ - ಸಂಸದೆ ಶೋಭಾ ಕರಂದ್ಲಾಜೆ
ಹಾವೇರಿ : ರಾಮ ಮಂದಿರ ನಿರ್ಮಾಣ ನಮ್ಮ ಕನಸು. ಈ ದೇಶದ ಮನೆ ಮನೆಯಲ್ಲಿ ರಾಮನಿದ್ದಾನೆ. ಟಾಟಾ, ಬಿರ್ಲಾ ಸೇರಿದಂತೆ ಅನೇಕರು ರಾಮ ಮಂದಿರ ನಿರ್ಮಿಸಿ ಕೊಡಲು ಮುಂದೆ ಬಂದಿದ್ದಾರೆ. ಅವರಿಂದ ಮಂದಿರ ನಿರ್ಮಾಣ ಬೇಡ. ರಾಮ ಮಂದಿರವನ್ನು ನಾವೇ ನಿರ್ಮಾಣ ಮಾಡಬೇಕು. ಇದೇ ಜ.15 ರಿಂದ ರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹ ಮಾಡೋಣ ಎಂದು ಸಂಸದೆ ಶೋಭಾ ಕರಂದ್ಲಾಜೆ ಹಾವೇರಿ ನಗರದ ಮಾಗಾವಿ ಕಲ್ಯಾಣ ಮಂಟಪದಲ್ಲಿ ನಡೆದ ಜನಸೇವಕ ಸಮಾವೇಶದಲ್ಲಿ ಹೇಳಿದ್ದಾರೆ.