ಕುಮಾರಸ್ವಾಮಿಗೆ ಕಾಂಗ್ರೆಸ್ ಬಗ್ಗೆ ತಡವಾಗಿ ಅರಿವಾಗಿದೆ: ಸಂಸದ ಪ್ರತಾಪ್ ಸಿಂಹ - mysore
ಮೈಸೂರು: ಕಾಂಗ್ರೆಸ್ ಜೊತೆ ಸೇರಿ ಕೆಟ್ಟೆ ಎಂದಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ತಡವಾಗಿ ಅರಿವಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಜೊತೆ ಸರ್ಕಾರ ರಚನೆ ಮಾಡಿದ್ದ ವೇಳೆ ಹೆಚ್ಡಿಕೆ ಅವರು ರಾಜ್ಯದಲ್ಲಿ ಮನೆ ಮಾತಾಗಿದ್ದರು. 20 ತಿಂಗಳ ಆಡಳಿತ ಸಾಕಷ್ಟು ಹೆಸರು ತಂದು ಕೊಟ್ಟಿತ್ತು. ಗ್ರಾಮ ವಾಸ್ತವ್ಯ, ಜನರ ಜೊತೆ ಬೆರೆಯುವ ನಡೆಯಿಂದ ಅವರಿಗೆ ಒಳ್ಳೆಯ ವರ್ಚಸ್ಸು ಸಿಕ್ಕಿತ್ತು. ಬಿಜೆಪಿಯೊಂದಿಗೆ ಸರ್ಕಾರ ಮಾಡಿ ಉತ್ತಮ ಆಡಳಿತ ನಡೆಸಿದ್ದ ಅವರ ಬಗ್ಗೆ ಗೌರವವಿದೆ ಎಂದು ಪ್ರತಾಪ್ ಸಿಂಹ ತಿಳಿಸಿದರು.