ಬ್ಯಾಟ್ ಹಿಡಿದು ಫೀಲ್ಡ್ಗಿಳಿದ ಸಂಸದ: ಪ್ರಜ್ವಲ್ ರೇವಣ್ಣ ಬ್ಯಾಟಿಂಗ್ಗೆ ಅಭಿಮಾನಿಗಳು ಫಿದಾ
ಸಂಸದ ಪ್ರಜ್ವಲ್ ರೇವಣ್ಣ ರಾಜಕೀಯಕ್ಕೂ ಸೈ, ಕ್ರಿಕೆಟ್ಗೂ ಸೈ ಎಂದು ಬ್ಯಾಟ್ ಬೀಸಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಹಾಸನ ಜಿಲ್ಲೆಯ ಹೊಳೆನರಸೀಪುರದ, ಹೇಮಾವತಿ ಗ್ರೌಂಡ್ನಲ್ಲಿ ಕ್ರಿಕೆಟ್ ಟೂರ್ನ್ಮೆಂಟ್ ಆಯೋಜನೆ ಮಾಡಲಾಗಿತ್ತು. 'ಹೊಳೆನರಸೀಪುರ ಪ್ರೀಮಿಯರ್ ಲೀಗ್' ಹೆಸರಲ್ಲಿ ನಡೆದ ಆರು ಓವರ್‌ಗಳ ಟೂರ್ನಿಯಲ್ಲಿ, ಸಂಸದ ಪ್ರಜ್ವಲ್ ನಾಯಕತ್ವದ ಗೋಲ್ಡನ್ ಫಿನಿಕ್ಸ್ ತಂಡ ಕೂಡ ಪಾಲ್ಗೊಂಡಿತ್ತು. ಮೊದಲನೇ ಪಂದ್ಯದಲ್ಲಿ ಒಂದು ಸಿಕ್ಸರ್ ಸಹಿತ 13 ರನ್ ಬಾರಿಸಿದ ಸಂಸದ ಪ್ರಜ್ವಲ್ ರೇವಣ್ಣ, ತಂಡವನ್ನು ಗೆಲುವಿನ ದಡ ಸೇರಿಸಿದ್ರು. ಪ್ರಜ್ವಲ್ ರೇವಣ್ಣ ಅವರ ಭರ್ಜರಿ ಬ್ಯಾಟಿಂಗ್ ನೋಡಿ ಅವರ ಬೆಂಬಲಿಗರು ಸಂಭ್ರಮಿಸಿದ್ದು, ಸಂಸದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.