'ಸಿಎಂ ನಿಧಿ ರಕ್ಷಣೆಗೆ ಫಡ್ನವೀಸ್ ಸರ್ಕಾರ ರಚಿಸಿ ಹೈಡ್ರಾಮಾ ಮಾಡಿದ್ವಿ': ಅನಂತ್ ಕುಮಾರ್ ಹೆಗ್ಡೆ ಅಚ್ಚರಿಯ ಹೇಳಿಕೆ - ಸಿಎಂ ನಿಧಿ ರಕ್ಷಣೆಗೆ ಫಡ್ನವೀಸ್ ಸರ್ಕಾರ ರಚನೆ
ಮಹಾರಾಷ್ಟ್ರ ಸಿಎಂ ನಿಧಿಯಲ್ಲಿ 40,000 ಕೋಟಿ ಹಣ ಉಳಿದಿತ್ತು. ಎನ್ಸಿಪಿ-ಶಿವಸೇನೆ-ಕಾಂಗ್ರೆಸ್ ಮೈತ್ರಿಕೂಟ ಅಧಿಕಾರಕ್ಕೆ ಬಂದಲ್ಲಿ ಈ ಹಣ ಪೋಲಾಗುತ್ತದೆ ಎನ್ನುವ ಕಾರಣಕ್ಕೆ ಬಿಜೆಪಿ ಅಲ್ಲಿ ಹೈಡ್ರಾಮಾ ಮಾಡಿತು. ತರಾತುರಿಯಲ್ಲಿ ದೇವೇಂದ್ರ ಫಡ್ನವೀಸ್ ಪ್ರಮಾಣ ವಚನ ಸ್ವೀಕರಿಸಿ 15 ಗಂಟೆಯಲ್ಲಿ ಸಿಎಂ ನಿಧಿಯನ್ನು ಕೇಂದ್ರಕ್ಕೆ ವರ್ಗಾಯಿಸಿದರು. ಮಹಾರಾಷ್ಟ್ರ ಬಿಜೆಪಿಗೆ ಬಹುಮತ ಇಲ್ಲ ಎನ್ನುವುದು ಎಲ್ಲರಿಗೂ ತಿಳಿದಿತ್ತು ಎಂದು ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗ್ಡೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
TAGGED:
Ananth Kumar hegde speech